ಬ್ರಹ್ಮಾವರ: ತಾಯಿಯ ಕಂಕುಳಿನಲ್ಲಿದ್ದ ಒಂದೂವರೆ ವರ್ಷದ ಗಂಡು ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟ ದಾರುಣ ಘಟನೆ ಹೆರಂಜೆಯಲ್ಲಿ ಮಂಗಳವಾರ ನಡೆದಿದೆ.

ತಾಯಿ ತನ್ನ 6 ವರ್ಷದ ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ವೇಳೆ ಸಣ್ಣ ಮಗುವನ್ನು ಎತ್ತಿಕೊಂಡು ತೆರಳುತ್ತಿದ್ದರು. ಈ ವೇಳೆ ದಾರಿಬದಿಯ ತೆಂಗಿನ ಮರದಿಂದ ಅಚಾನಕ್‌ವಾಗಿ ಬಿದ್ದ ತೆಂಗಿನಕಾಯಿ ಮಗುವಿನ ತಲೆಗೆ ಬಡಿದಿದೆ.

ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಂಜೆಯ ವೇಳೆ ಮೃತಪಟ್ಟಿದೆ.






