Breaking
4 Aug 2026, Tue

ಕಿಡಿಗೇಡಿಗಳ ಕೃತ್ಯ: ನೆಟ್ವರ್ಕ್ ಕೇಬಲ್ ಕಟ್ ಮಾಡಿ ಹಾನಿ

ಕಲ್ಲಡ್ಕ: ಕಿಡಿಗೇಡಿಗಳು ನೆಟ್ವರ್ಕ್ ಸಂಪರ್ಕದ ಕೇಬಲ್ ಕತ್ತರಿಸಿ ಹಾನಿಗೊಳಿಸಿರುವ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಂಕೋಡಿ ಪರಿಸರದಲ್ಲಿ ನಡೆದಿದೆ.

ಕಲ್ಲಡ್ಕ ಸ್ಟಾರ್ ನೆಟ್ವರ್ಕ್ ಸಂಸ್ಥೆಯವರು ಮನೆಗಳಿಗೆ ಸಂಪರ್ಕ ಕಲ್ಪಿಸಲು ಅಳವಡಿಸಿದ್ದ ನೆಟ್ವರ್ಕ್ ಕೇಬಲ್‌ನ್ನು ಬುಧವಾರ ಮುಂಜಾನೆ ಸುಮಾರು 3.17ರ ವೇಳೆಗೆ ದುಷ್ಕರ್ಮಿಗಳು ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ಕೃತ್ಯ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *