ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಬಂಟ್ವಾಳ ವತಿಯಿಂದ ಅಧಿಕಮಾಸದ ಪರ್ವಕಾಲದ ಅಂಗವಾಗಿ ಮನೆ-ಮನೆಗಳಲ್ಲಿ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಐದನೇ ಮಾಲಿಕೆಯಾಗಿ ಶಾಂಭವಿ ಎಸ್. ರಾವ್ ಅವರ ಆಮ್ ಟೂರ್ ನಿವಾಸದಲ್ಲಿ ಸಾಮೂಹಿಕ ನಾಮಸಂಕೀರ್ತನೆ ಕಾರ್ಯಕ್ರಮ ಬುಧವಾರ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಪುರೋಹಿತ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹೊಳ್ಳ, ವೇದಮೂರ್ತಿ ರಾಜೇಶ್ ಮೈಯ್ಯ, ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಉಮಾ ಸೋಮಯಾಜಿ, ಭಜನಾ ಮಂಡಳಿಯ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಭಕ್ತರು ಭಜನೆ, ನಾಮಸ್ಮರಣೆ ಹಾಗೂ ದೇವರ ಸ್ತುತಿಗೀತೆಗಳ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಿಸಿ, ಅಧಿಕಮಾಸದ ಮಹತ್ವವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಣೆ ಸಲ್ಲಿಸಿದರು.






