Breaking
8 Jun 2026, Mon

ಉಡುಪಿ: ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮಹಿಳೆ ದುರ್ಮರಣ

ಉಡುಪಿ: ಸೆಪ್ಟಿಕ್ ಟ್ಯಾಂಕ್‌ಗೆ ಆಕಸ್ಮಿಕವಾಗಿ ಬಿದ್ದು 74 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬಡನಿಡಿಯೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಆಲಿಸ್ ಡಿ’ಸೋಜಾ (74) ಎಂದು ಗುರುತಿಸಲಾಗಿದೆ. ಅವರು ಮನೆಯ ಸಮೀಪ ಬಟ್ಟೆ ಒಗೆದು ಒಣಗಿಸಲು ತೆರಳಿದ್ದ ವೇಳೆ ಸೆಪ್ಟಿಕ್ ಟ್ಯಾಂಕ್‌ನ್ನು ಮುಚ್ಚಿದ್ದ ಕಲ್ಲಿನ ಚಪ್ಪಡಿಯ ಮೇಲೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಟ್ಯಾಂಕ್ ಒಳಗೆ ಬಿದ್ದು ಕಾಂಕ್ರೀಟ್ ತುಂಡುಗಳ ನಡುವೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಕುಟುಂಬ ಸದಸ್ಯರು ಬಹಳ ಹೊತ್ತಿನವರೆಗೆ ಕಾಣಿಸದಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮಹಿಳೆ ಟ್ಯಾಂಕ್ ಒಳಗೆ ಸಿಲುಕಿರುವುದು ಪತ್ತೆಯಾಯಿತು. ಸ್ಥಳೀಯರ ಸಹಾಯದಿಂದ ಅವರನ್ನು ಹೊರತೆಗೆದರೂ ಆಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *