Breaking
8 Jun 2026, Mon

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ಹಾಗೂ ಗೊಳ್ತಾಮಾಜಲ್ ಎ ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಕಲ್ಲಡ್ಕ ಹಾಗೂ ಗೊಳ್ತಮಾಜಲ್ ಎ ಒಕ್ಕೂಟದ ತ್ರೈಮಾಸಿಕ ಸಭೆಯು ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಭಾನುವಾರ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್ ಅವರು ಯೋಜನೆಯ ವಿವಿಧ ಚಟುವಟಿಕೆಗಳು, ಸದಸ್ಯರ ಜವಾಬ್ದಾರಿಗಳು, ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕಲ್ಲಡ್ಕ ಮತ್ತು ಗೊಳ್ತಮಾಜಲ್ ಎ ಒಕ್ಕೂಟ ವ್ಯಾಪ್ತಿಯಲ್ಲಿ ಯೋಜನೆಯ ಮೂಲಕ ದೊರೆತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೊಳ್ತಮಾಜಲ್ ಎ ಒಕ್ಕೂಟವನ್ನು ಕಲ್ಲಡ್ಕ ಒಕ್ಕೂಟದೊಂದಿಗೆ ವಿಲೀನಗೊಳಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಿದಾನಂದ ಪಟ್ಟಕೋಡಿ, ಉಪಾಧ್ಯಕ್ಷರಾಗಿ ಲೀಲಾವತಿ ಕೊಳಕಿರು, ಕಾರ್ಯದರ್ಶಿಯಾಗಿ ಸ್ವರ್ಣಲತಾ ಮನಿಮಾಜಲ್, ಜಂಟಿ ಕಾರ್ಯದರ್ಶಿಯಾಗಿ ಧನಂಜಯ ಬೊಂಡಲ ಹಾಗೂ ಕೋಶಾಧಿಕಾರಿಯಾಗಿ ವಿನೋದ್ ಆಯ್ಕೆಯಾದರು.

ಇದೇ ವೇಳೆ ನಿರ್ದೇಶಕರಾಗಿ ವೆಂಕಪ್ಪ, ಗೀತಾ ಗೊಳ್ತಮಾಜಲ್ ಹಾಗೂ ದಾಖಲಾತಿ ಸಮಿತಿಗೆ ಶಶಿಕಲಾ, ಅರುಣಾಕ್ಷಿ ಮತ್ತು ತ್ರಿವೇಣಿ ಅವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಗೊಳ್ತಮಾಜಲ್ ಎ ಒಕ್ಕೂಟದ ಅಧ್ಯಕ್ಷೆ ಮಮತಾ, ಪದಾಧಿಕಾರಿಗಳಾದ ಉಷಾ, ಬೇಬಿ, ವೆಂಕಪ್ಪ, ದೇವಕಿ, ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು. ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *