ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ವಿಟ್ಲ ಇದರ ಮಾಣಿ ವಲಯದ ಅನಂತಾಡಿ ಕಾರ್ಯಕ್ಷೇತ್ರ ದ ಮಹಾಲಿಂಗೇಶ್ವರ ತಂಡದ ಪೂವಪ್ಪ ಮಡಿವಾಳ ರವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಯೋಜನೆ ವತಿಯಿಂದ ಮಂಜೂರಾದ ರೂ 25000/- ಕೃಟಿಕಲ್ ಫಂಡ್ ಮೊತ್ತವನ್ನು ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ – 2 ರ ಜಿಲ್ಲಾ ನಿರ್ದೇಶಕರದ ಬಾಬು ನಾಯ್ಕ್ ವಿತರಿಸಿದರು.

ಈ ಸಂದರ್ಭದಲ್ಲಿ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ಎಸ್, ಮಾಣಿ ವಲಯ ಮೇಲ್ವಿಚಾರಕಿ ಆಶಾಪಾರ್ವತಿ, ಸೇವಾ ಪ್ರತಿನಿಧಿ ಪುಷ್ಪಲತಾ, ಕಚೇರಿ ಸಿಬ್ಬಂದಿ ನಾಗರತ್ನ ಉಪಸ್ಥಿತರಿದ್ದರು.





