ಮೈಸೂರು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯಭೇರಿ ಬಾರಿಸಿದ ಈರಪ್ಪನಕೊಪ್ಪಲು ಕಾವಿ ಬಸಪ್ಪ ಹಾಗೂ 20 ಜನ ತಂಡದ ನಿರ್ದೇಶಕರುಗಳಿಗೆ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ವಿಜಯಶಾಲಿಗಳಾದ ಈರಪ್ಪನಕೊಪ್ಪಲು ಕಾವಿ ಬಸಪ್ಪ ಅವರ ತಂಡದಲ್ಲಿ 13 ಮಂದಿ ಪುರುಷ ಅಭ್ಯರ್ಥಿಗಳು ಹಾಗೂ 7 ಮಂದಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸಮಾಜದ ವಿಶ್ವಾಸ, ಪ್ರೀತಿ ಮತ್ತು ಆಶೀರ್ವಾದಗಳಿಗೆ ಪಾತ್ರರಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಅಭಿನಂದನಾ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಈ ಗೆಲುವು ಕೇವಲ ವೈಯಕ್ತಿಕ ವಿಜಯವಲ್ಲದೆ, ಸಮಾಜದ ಅಭಿವೃದ್ಧಿ, ಸಂಘಟನಾ ಶಕ್ತಿ ಹಾಗೂ ಸೇವಾಭಾವನೆಗೆ ದೊರೆತ ಗೌರವವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸಿ, ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಮಹಾಸಭೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ಸಮಾಜಮುಖಿ ಕಾರ್ಯಗಳಿಗೆ ಹೊಸ ದಿಕ್ಕು ನೀಡಲಿದ್ದಾರೆ ಎಂಬ ವಿಶ್ವಾಸವನ್ನುಸಮಾಜದ ಜನರಲ್ಲಿ ಮೂಡಿದೆ.

ಸಮಾಜದ ಆಶೋತ್ತರಗಳನ್ನು ಹೊತ್ತು ಮಹಾಸಭೆಯ ಅಭಿವೃದ್ಧಿಗೆ ನಿಷ್ಠೆಯಿಂದ ದುಡಿಯುವ ಮೂಲಕ ಯುವಜನತೆಗೆ ಪ್ರೇರಣೆಯಾಗಲಿ ಹಾಗೂ ಸಮಾಜದ ಏಕತೆ ಮತ್ತು ಸಂಘಟನಾ ಶಕ್ತಿ ಇನ್ನಷ್ಟು ವೃದ್ಧಿಸಲಿ ಎಂದು ಹಾರೈಸಲಾಯಿತು. ಇವರ ಆಡಳಿತಾವಧಿಯಲ್ಲಿ ಮಹಾಸಭೆ ಇನ್ನಷ್ಟು ಪ್ರಗತಿಯ ಪಥದಲ್ಲಿ ಸಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, ರಾಜ್ಯ ಖಜಾಂಜಿ ನಂಜುಂಡ, ಮೈಸೂರು ಪ್ರಾಂತ್ಯ ಅಧ್ಯಕ್ಷ ಅಜಯ್ ಶೆಟ್ಟಿ, ಇವಿ ನಾಗರಾಜ್, ತಾರಾ, ವತ್ಸಲ, ರಶ್ಮಿ ಸಿಂಗ್, ಪಿಜಿಆರ್‌ಎಸ್‌ಎಸ್ ಸಂಸ್ಥೆಯ ಅಧ್ಯಕ್ಷ ಹರೀಶ್ ಯಾದವ್, ಹರ್ಷ, ಚಿಕ್ಕಾಡನಹಳ್ಳಿ ಆನಂದ, ಬಸವರಾಜ್, ಲಿಂಗರಾಜಪ್ಪ ಸೇರಿದಂತೆ ವೇದಿಕೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


