Breaking
14 Jul 2026, Tue

ನಂದಾವರ ಶ್ರೀ ನಂದ ನಾಗ ಸನ್ನಿಧಿಯಲ್ಲಿ ವಿಶೇಷ ನಾಗಪೂಜೆ ಹಾಗೂ ಅಭಿಷೇಕ

ಸಜೀಪ: ಶ್ರೀ ನಂದ ನಾಗ ಸನ್ನಿಧಿ ನಂದಾವರ ಕ್ಷೇತ್ರದಲ್ಲಿ ಭಕ್ತಿಭಾವದಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಶ್ರೀ ನಾಗದೇವರ ಸನ್ನಿಧಿಯಲ್ಲಿ ಶ್ರೀ ಚಿತ್ರಕೂಟ ನಾಗ, ಶ್ರೀ ನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ಶ್ರೀ ಧೂಮಾವತಿ, ಶ್ರೀ ನಂದಿಕೋಣ ಹಾಗೂ ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ನಾಗದೇವರಿಗೆ ಫಲ ಪಂಚಾಮೃತ ಅಭಿಷೇಕ, ಶ್ರೀ ಪವಮಾನ ಸೂಕ್ತ ಅಭಿಷೇಕ, ನಾಗತಂಬಿಲ ಹಾಗೂ ದೈವಗಳಿಗೆ ಪರ್ವ ಸೇವೆ ಮತ್ತು ಪ್ರಸನ್ನ ಪೂಜೆಗಳು ನಡೆದವು.

ಕಾರ್ಯಕ್ರಮವು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಸಂಪ್ರದಾಯ ಬದ್ಧವಾಗಿ ನೆರವೇರಿತು.

Leave a Reply

Your email address will not be published. Required fields are marked *