
ವಿಟ್ಲ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ನಡುವಳಚ್ಚಿಲು ಅನಾರೋಗ್ಯ ಪೀಡಿತ ಬಡ ಮಹಿಳೆ ಕುಸುಮ ಪೂಜಾರ್ತಿ ಅವರ ಮುರಿದು ಹೋಗಿ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯ ಮೇಲ್ಛಾವಣಿಯ ದುರಸ್ತಿ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ವತಿಯಿಂದ ವಿಟ್ಲ ಬಿಲ್ಲವ ಸಂಘ ಹಾಗೂ ಯುವವಾಹಿನಿ ವಿಟ್ಲ ಇವರ ಸಹಕಾರದೊಂದಿಗೆ ನಡೆಸಲಾಯಿತು.

ಮಳೆಗಾಲದಲ್ಲಿ ಸಂಪೂರ್ಣ ಧರಾಶಾಹಿಯಾಗುವ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯ ಮೇಲ್ಚಾವಣಿಗೆ ಮರದ ಪಕ್ಕಾಸು, ರೀಪುಗಳನ್ನು ಅಳವಡಿಸಿ ದುರಸ್ತಿಗೊಳಿಸಲಾಯಿತು. ಮಳೆಗಾಲವನ್ನು ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿದ್ದ ಕುಸುಮ ಪೂಜಾರ್ತಿಯವರ ಬಗ್ಗೆ ಮಾಹಿತಿ ಪಡೆದ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಮನೆಯ ಮೇಲ್ಚಾವಣಿ ರಿಪೇರಿಗೆ ಬೇಕಾದ ಸಲಕರಣೆ ವಿಟ್ಲ ಬಿಲ್ಲವ ಸಂಘ ಹಾಗೂ ಯುವ ವಾಹಿನಿಯನ್ನು ಸಂಪರ್ಕಿಸಿದಾಗ ಮನೆಯ ಮೇಲ್ಚಾವಣಿ ರಿಪೇರಿಗೆ ಬೇಕಾದ ಪರಿಕರಗಳನ್ನು ಒದಗಿಸಿದರು.

ತಕ್ಷಣ ದುರಸ್ತಿ ಕಾರ್ಯ ಕೈಗೆತಿಗೊಂಡ ತಂಡದ ಸದಸ್ಯರು ಸ್ಥಳೀಯರನ್ನು ಒಟ್ಟು ಕೂಡಿಸಿಕೊಂಡು ಮನೆ ದುರಸ್ತಿಕಾರ್ಯ ಶ್ರಮದಾನದ ಮೂಲಕ ನಡೆಸಿದರು.
ಈ ಶ್ರಮದಾನ ಕಾರ್ಯ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ವಿಟ್ಲ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಸುವರ್ಣ, ಮಾಧವ ಪಟ್ಲ, ಸಂಘಟನಾ ಕಾರ್ಯದರ್ಶಿ ಸುಧಾಕರ ಪೂಜಾರಿ ಬಡೆಕ್ಕೋಡಿ, ಯುವವಾಹಿನಿ(ರಿ) ವಿಟ್ಲ ಘಟಕದ ಅಧ್ಯಕ್ಷ ಕೆ.ಟಿ.ಆನಂದ, ವೀರಕಂಬ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂದೀಪ್ ಪೂಜಾರಿ ಕೆಲಿಂಜ, ಯೋಜನೆಯ ಒಕ್ಕೂಟ ಸೇವಾಪ್ರತಿನಿಧಿ ರೇವತಿ ಭೇಟಿ ನೀಡಿ ಶ್ರಮದಾನಕ್ಕೆ ಪ್ರೋತ್ಸಾಹಿಸಿದರು.

ಶ್ರಮದಾನ ಕಾರ್ಯದಲ್ಲಿ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ನಿಯೋಜಿತ ಅಧ್ಯಕ್ಷ ಗಣೇಶ್ ನೆಟ್ಲ, ಘಟಕ ಸಂಯೋಜಕ ವಿದ್ಯಾ, ಸದಸ್ಯರುಗಳಾದ ರವಿಚಂದ್ರ, ವೆಂಕಪ್ಪ, ಸತೀಶ್, ಚಿನ್ನಾ,ರಮೇಶ್, ಧನಂಜಯ, ಸಂತೋಷ್, ಹರೀಶ್, ತುಳಸಿ, ಕೆಲಿಂಜ ಒಕ್ಕೂಟ ಅಧ್ಯಕ್ಷ ದಯಾನಂದ ಮಂಗಳಪದವು, ಸ್ಥಳೀಯರಾದ ರಾಜೇಂದ್ರ ಟೈಲರ್, ,ಅನಂತೇಶ್ ಕೆಲಿಂಜ, ಸಂದೇಶ್ ಕೆಲಿಂಜ, ರಾಜೇಶ್ ಕುಂಡಡ್ಕ, ಶಿವಕುಮಾರ್ ವಿಟ್ಲ,ರಾಜೇಶ್ ಆಣೆಪದವು, ಇನ್ನಿತರರು ಭಾಗವಹಿಸಿದ್ದರು.


