ಬಂಟ್ವಾಳ : ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬಿಸಿ ರೋಡಿನಲ್ಲಿ ಸೋಮವಾರ ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಪಾಠ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ವೇದಮೂರ್ತಿ ಐಲ ಶಿವಾನಂದ ಮಯ್ಯ ಗುರುಗಳಾಗಿ ಪಾಠ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಎ. ರವಿಶಂಕರ ಮಯ್ಯ, ಕೂಟ ಮಹಾ ಜಗತ್ತು ಬಂಟ್ವಾಳ ಅಧ್ಯಕ್ಷ ಕೆ ರಮೇಶ ಹೊಳ್ಳ, ಎಂ ಶಾಂತರಾಮ ರಾವ್, ಜಯರಾಮ ಮಯ್ಯ, ಎನ್ ರಾಮಚಂದ್ರ ಮೈಯ, ಎ ಕೃಷ್ಣ ಶೋಮಯಾಜಿ, ಚಂದ್ರಮೋಹನ ರಾವ್, ಮಿಥುನ ರಾವ್ ಕೆ, ಶ್ರೀನಿಧಿ ಭಟ್ ಮೊದಲಾದವರು ಉಪಸ್ಥಿತರಿದ್ದರು.







