Breaking
23 Dec 2024, Mon

ಹೊಕ್ಕಾಡಿಗೋಳಿ ಶಾಲೆಯಲ್ಲಿ ಸಂಭ್ರಮದವಾರ್ಷಿಕೋತ್ಸವ ಸಮಾರಂಭ

ಸಿದ್ಧಕಟ್ಟೆ: ಹೊಕ್ಕಾಡಿಗೋಳಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ಡಿಸೆಂಬರ್‌ 23ಶುಕ್ರವಾರದಂದು ನಡೆಯಿತು. ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಕೃಷ್ಣಪ್ರಸಾದ್ ಆಚಾರ್ಯ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆಯಲ್ಲಿ ಬೆಳಗ್ಗಿನ ಸಭಾ ಕಾರ್ಯಕ್ರಮವು ನೆರವೇರಿತು. ಕಾರ್ಯಕ್ರಮದಲ್ಲಿ ನಿವ್ರತ್ತ ಮುಖ್ಯ ಶಿಕ್ಷಕರಾದ ಶ್ರೀ ಕೃಷ್ಣಪ್ಪ ಮಾಸ್ಟರ್, ಶ್ರೀ ರಾಜು ಪೂಜಾರಿ, ಶ್ರೀ ರುಕ್ಮಯ್ಯ ಪೂಜಾರಿ ಹಾಗೂ ಪ್ರಾ. ಶಾ. ಶಿ. ಕೋಶಾಧಿಕಾರಿ ಶ್ರೀ ರಾಜೇಶ್ ನೆಲ್ಯಾಡಿ ಇವರನ್ನು ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲೆಯ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಸುಚಿತ್ರ, ಮೆಟಿಲ್ದಾ ಡಿಸೋಜ, ಶುಭವತಿ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಶ್ರೀಮತಿ ಡಾಕ್ಟರ್ ಸ್ಮೃತಿ ಯು, PDO , ಶ್ರೀ ಗಣೇಶ್ ಶೆಟ್ಟಿ ಜೋನಲ್ ಲೆಫ್ಟಿನೆಂಟ್ ರೋಟರಿ ಜಿಲ್ಲೆ 3181 ವಲಯ 4, ಶ್ರೀ ರಮೇಶ್ ಮಂಜಿಲಾ ಮಾಜಿ ನಿರ್ದೇಶಕರು, ಸಿಎ ಬ್ಯಾಂಕ್, ಶ್ರೀ ಮನೋಜ್ ಕುಮಾರ್ ಉದ್ಯಮಿಗಳು, ಬೆಂಗಳೂರು, ಕಿರಣ್ ಮಂಜಿಲಾ ಉದ್ಯಮಿಗಳು, ಶಿಕ್ಷಣ ಸಂಯೋಜಕರಾದ ಸಿದ್ದಲಿಂಗ ಸ್ವಾಮಿ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರ ಎಸ್ ಸ್ವಾಗತಿಸಿ ಕುಮಾರಿ ಸುತಿಕ್ಷ ಧನ್ಯವಾದವಿತ್ತರು. ಶ್ರೀಮತಿ ಸಿಲ್ವಿಯ ಮಿರಾಂದ ಕಾರ್ಯಕ್ರಮ ನಿರೂಪಿಸಿದರು. . ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿ ಭೇಟಿ ನೀಡಿ ಮಕ್ಕಳಿಗೆ ಶುಭ ಹಾರೈಸಿದರು

ಅಪರಾಹ್ನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮವು ಗ್ರಾಮ ಪಂಚಾಯತ್ ಆರಂಬೋಡಿ ಇಲ್ಲಿನ ಅಧ್ಯಕ್ಷರಾದ ಪ್ರವೀಣ ಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು
ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷರು, ಕಂಬಳ ಸಮಿತಿ ಸಿದ್ಧಕಟ್ಟೆ ಕೊಡಂಗೆ ಇವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
1982 ರಲ್ಲಿ ಶಾಲೆಯ ಪ್ರಾರಂಭದ ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯರಾದ ಹರೀಶ್ ಹಿಂಗಾಣಿ, ಆನಂದ ಬೃಂದಾವನ, ರಮೇಶ್ ಮಂಜಿಲ, ಶ್ರೀಮತಿ ಲಕ್ಷ್ಮಿ ಕಾಂತರಬೆಟ್ಟು ಇವರನ್ನು ಅಭಿನಂದಿಸಲಾಯಿತು. ಶ್ರೀ ದುರ್ಗಾ ಪೂಜಾರಿ, ರಘು ಚಂದ್ರ ಇವರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರನ್ನು ಗೌರವಿಸಲಾಯಿತು.

ದಿವಂಗತರಾದ ಜಾರಪ್ಪ ಪೂಜಾರಿ ಹಿಂಗಾಣಿ, ಅಬ್ಬಾಸ್ ಹೊಕ್ಕಾಡಿಗೋಳಿ,ಅಶೋಕ ಕುಮಾರ್ ಚೌಟ,ಆನಂದ ಹಿಂಗಾಣಿ ,ಶಿವಪ್ಪ ಪೂಜಾರಿ, ವಾಸು ಪೂಜಾರಿ ಚೀoಕ್ರ ಪೂಜಾರಿ, ಗಂಗಯ್ಯ ಶೆಟ್ಟಿಗಾರ್, ಅಣ್ಣು ಪೂಜಾರಿ ಕಾಂತರಬೆಟ್ಟು ಇವರ ನೆನಪಿಗಾಗಿ ಇವರ ಸಂಬಂಧಿಗಳನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಆರಂಬೋಡಿ ಇಲ್ಲಿನ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ, ಸದಸ್ಯರಾದ ಶ್ರೀ ಪ್ರಭಾಕರ್ ಎಚ್, ಶ್ರೀ ಸುರೇಂದ್ರ ಉಪಸ್ಥಿತರಿದ್ದರು. ಶ್ರೀ ಜಗದೀಶ್ ಹೆಚ್. ಬಿ ಐ ಇ ಆರ್ ಟಿ, ಬೆಳ್ತಂಗಡಿ, ಶ್ರೀರಕ್ಷಣ್ ಮೇಲಂಟ, ಉದ್ಯಮಿ ಶ್ರೀ ಕೃಷ್ಣ ಕ್ರಷರ್ ಹನ್ನೆರಡು ಕವಲು, ಶ್ರೀ ಸುರೇಶ್ ಶೆಟ್ಟಿ ಅಧ್ಯಕ್ಷರು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಬಂಟ್ವಾಳ, ಶಿವಯ್ಯ ಎಸ್ ಎಲ್ ಅಧ್ಯಕ್ಷರು, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ, ರಶ್ಮಿತ್ ಶೆಟ್ಟಿ ಅಧ್ಯಕ್ಷರು, ಹೊಕ್ಕಾಡಿಗೋಳಿ ಕಂಬಳ ಸಮಿತಿ, ಪ್ರಭಾಕರ ಪ್ರಭು ಅಧ್ಯಕ್ಷರು, ಸಿಎ ಬ್ಯಾಂಕ್ ಸಿದ್ದಕಟ್ಟೆ, ನಿಶಿತ್ ಡಿ ಹಿಂಗಾಣಿ ಸಾಫ್ಟ್ವೇರ್ ಪ್ರಾಜೆಕ್ಟ್ ಮ್ಯಾನೇಜರ್, ಜರ್ಮನಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಶಾಲಾ ವಾರ್ಷಿಕೋತ್ಸವದ ಯಶಸ್ವಿಗೆ ಪಾಲುದಾರರಾದ ಶ್ರೀಮತಿ ಶ್ವೇತಾ ಮನೋಜ್ ಪೂಜಾರಿ, ಎಸ್ ಮಹಮ್ಮದ್ ಟೋಟಲ್ ಕ್ಲೀನ್ ಲಾಂಡ್ರಿ ಸರ್ವಿಸ್, ಹೊಕ್ಕಾಡಿಗೋಳಿ, ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಿದ್ದಕಟ್ಟೆ, ಕೊಡಂಗೆ ಗ್ರಾಮ ಪಂಚಾಯತ್ ಆರಂಬೋಡಿ, ಶ್ರೀಮತಿ ರಾಜೀವಿ ನಾಗೇಶ್ ನಿಡ್ಯಾಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಹಾಗೂ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್ ಇವರುಗಳನ್ನು ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರ ಎಸ್ ಇವರು ಶಾಲಾ ವರದಿ ಮಂಡಿಸಿದರು ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಭಟ್ ಸ್ವಾಗತಿಸಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಸುಚಿತ್ರ, ಶ್ರೀಮತಿ ಮೆಟಿಲ್ದಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಉಪಸ್ಥಿತರಿದ್ದು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Leave a Reply

Your email address will not be published. Required fields are marked *