Breaking
23 Dec 2024, Mon

ಸಿದ್ದಕಟ್ಟೆಯ ಭಾರತಿ ಶೆಟ್ಟಿ ನೂಯಿ ಗಡಿ ರಕ್ಷಣಾ ಪಡೆ(BSF)ಗೆ ಆಯ್ಕೆ

ಸಿದ್ದಕಟ್ಟೆ: ಇಲ್ಲಿನ ಎಲಿಯನಡುಗೋಡು ಗ್ರಾಮದ ನೂಯಿ ನಿವಾಸಿ ಗಂಗಾಧರ ಶೆಟ್ಟಿ-ಸರೋಜ ದಂಪತಿಯ ಪುತ್ರಿ ಭಾರತಿ ಶೆಟ್ಟಿ ಇವರು ಭಾರತೀಯ ಸೇನೆಯ ಗಡಿರಕ್ಷಣಾ ಪಡೆಗೆ (ಬಿ ಎಸ್ ಎಫ್ ) ಆಯ್ಕೆಯಾಗಿದ್ದಾರೆ.

ಇವರ ತಂದೆ ಗಂಗಾಧರ ಶೆಟ್ಟಿ ಖಾಸಗಿ ಬಸ್ಸು ಚಾಲಕರಾಗಿದ್ದು ಇದೀಗ ಇವರ ಮಗಳು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.ಭಾರತಿಯವರ ಅಣ್ಣ ಮನೀಶ್ ಅಟೋಮೊಬೈಲ್ ಡಿಪ್ಲೋಮಾ ಪೂರೈಸಿ, ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ.ಇವರ ಅಕ್ಕ ದೀಕ್ಷಿತ ಪದವಿ ಪೂರೈಸಿದ ತರುವಾಯ ಮದುವೆಯಾಗಿ ಗಂಡನ ಮನೆಯಲ್ಲಿ ಇದ್ದಾರೆ.

ಭಾರತಿ ಶೆಟ್ಟಿ ಇವರು ಎಲಿಯ ನಡುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದರು. ತರುವಾಯ ಸಿದ್ದಕಟ್ಟೆಯ ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪದವಿ ಕಾಲೇಜುಗಳಲ್ಲಿ ಬಿಕಾಂ ಶಿಕ್ಷಣವನ್ನು ಪೂರೈಸಿದರು.

ಪ್ರಸ್ತುತ ಮುಂಬೈಯ ಭಾರತೀಯ ಸೇನೆಯಲ್ಲಿರುವ ಪೊಳಲಿ-ಬಿ ಸಿ ರೋಡ್ ನ ಸ್ಕಂದರಾಜ್ ಅವರ ಸತತ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನದಿಂದ ಕೇಂದ್ರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅವರ ಗಡಿರಕ್ಷಣಾ ಪರೀಕ್ಷೆಯನ್ನು ಫೆಬ್ರವರಿ 2024ರಲ್ಲಿ ಪೂರೈಸಿದರು. ಶಾರೀರಿಕ ದೇಹದಾಢ್ಯದ ಪರೀಕ್ಷೆಯನ್ನು ಸೆಪ್ಟೆಂಬರ್ 2024ರಲ್ಲಿ ಮೈಸೂರಿನಲ್ಲಿ ಪೂರ್ಣಗೊಳಿಸಿಕೊಂಡರು. ಈ ರೀತಿ ಎಲ್ಲ ರೀತಿಯ ಪರೀಕ್ಷೆಗಳನ್ನು ಪೂರೈಸಿಕೊಂಡು ಇದೀಗ ನವೆಂಬರ್ 14ರಂದು ಗಡಿರಕ್ಷಣಾಪಡೆಗೆ ಆಯ್ಕೆಗೊಂಡಿರುತ್ತಾರೆ. 2025 ರಲ್ಲಿ ತರಬೇತಿ ಪ್ರಾರಂಭಗೊಳ್ಳಲಿದ್ದು ಸ್ಥಳದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ.

ಎಲ್ಲ ರೀತಿಯ ಪರೀಕ್ಷೆಗಳಲ್ಲೂ ಯಶಸ್ವಿಯಾದ ಈಕೆ ಗಡಿರಕ್ಷಣಾ ಪಡೆಯ ತರಬೇತಿಯಲ್ಲಿಯೂ ಖ್ಯಾತಿಯನ್ನು ಗಳಿಸಿ ಕೀರ್ತಿಯನ್ನು ಸಂಪಾದಿಸಲಿ ಎಂದು ಹಾರೈಸುವ.

Leave a Reply

Your email address will not be published. Required fields are marked *