ವಿಟ್ಲ: ಉಡುಪಿ – ಕಾಸರಗೋಡು ೪೦೦ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ರೈತ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವವರ ಕುಟುಂಬ ಸರ್ವನಾಶವಾಗಬೇಕೆಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶೋಕಮಾತಾ ಇಗರ್ಜಿ, ಕಂಬಳಬೆಟ್ಟು ಹಜರತ್ ವಲಿಯುಲ್ಲಾಹಿ ದರ್ಗಾ ಶರೀಫ್ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರೈತರಿಗೆ ಸಮಸ್ಯೆಯಾಗುವ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮ ಆಗಿಲ್ಲ. ಮನಪರಿವರ್ತನೆಯಾಗಿ ರೈತರ ಪರವಾಗಿ ಇರುವಂತೆ ಅನುಗ್ರಹಿಸಬೇಕು. ವಿಟ್ಲ ಸೀಮೆಗೆ ಹಾಗೂ ಜಿಲ್ಲೆಗೆ ಮಾರಕವಾದ ಯಾವ ಯೋಜನೆಯೂ ಬರಬಾರದು. ರೈತರಿಗೆ ನಿರಂತರ ದಬ್ಬಾಳಿಕೆ ಮಾಡುವವರು ಮತ್ತು ಪರಿಸರದ ಮೇಲೆ ದಬ್ಬಾಳಿಕೆ ಮಾಡುವವರ ಮತ್ತು ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿರುವವಾರ ಅಂತ್ಯವಾಗಬೇಕೆಂದು ಎಂದು ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಪ್ರಾರ್ಥಿಸಿದರು.
ಅರ್ಚಕ ಕೃಷ್ಣ ಪ್ರಸಾದ್ ಬನ್ನಿಂತಾಯ, ಧರ್ಮಗುರುಗಳಾದ ಐವನ್ ಮೈಕಲ್ ರೋಡ್ರಿಗಸ್, ಅಬೂಬ್ಬಕರ್ ನೇತೃತ್ವದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ರಾಬರ್ಟ್ ಮಂಗಿಲಪದವು, ಶ್ರೀನಿವಾಸ ಮರಡಿತ್ತಾಯ ವನಭೋಜನ, ರಾಜೀವ ಗೌಡ ಬೋಳಿಗದ್ದೆ, ಶಹೀಲ್ ಮಂಗಳಪದವು, ಚಿತ್ತರಂಜನ್ ಎನ್ ಎಸ್ ಡಿ, ರೋಹಿತಾಶ್ವ ಭಂಗ, ಅಣ್ಣು ಗೌಡ, ಆನಂದ ಗೌಡ, ತಿಮ್ಮಪ್ಪ ಪೂಜಾರಿ, ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ, ರಾಜೀವ ಕಾಯರ್ಮಾರು, ರವಿ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.