ಮಂಗಳೂರು: ಕಾಪು ಉದ್ಯಾವರ ಗುಡ್ಡೆಯಂಗಡಿಯ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಜಯಲಕ್ಷ್ಮೀ (71) ಅವರು ಮೇ 7ರಂದು ಮೃತಪಟ್ಟಿರುವ ಘಟನೆ ನಡೆದಿದೆ.

ಸುಮಾರು ಒಂದೂವರೆ ವರ್ಷದ ಹಿಂದೆ ಬೈಂದೂರು ಸೇನಾಪುರ ಪರಿಸರದಲ್ಲಿ ಅಸಹಾಯಕರಾಗಿ ಅಲೆದಾಡುತ್ತಿದ್ದ ಜಯಲಕ್ಷ್ಮೀ ಅವರನ್ನು ಸ್ಥಳೀಯರಾದ ವೆಂಕಟಾಚಲ ಐತಾಳ್ ಹಾಗೂ ಕೃಷ್ಣಮೂರ್ತಿ ಐತಾಳ್ ಅವರು ಉಡುಪಿಯ ಸಹಾಯವಾಣಿ ಕೇಂದ್ರಕ್ಕೆ ಕರೆತಂದಿದ್ದರು. ಬಳಿಕ ಅವರನ್ನು ಉದ್ಯಾವರದ ಗುಡ್ಡೆಯಂಗಡಿಯಲ್ಲಿರುವ ಹಿರಿಯ ನಾಗರಿಕರ ಕನಸಿನಮನೆ ವೃದ್ಧಾಶ್ರಮಕ್ಕೆ ದಾಖಲಿಸಲಾಗಿತ್ತು.

ಮೇ 7ರಂದು ಆಶ್ರಮದಲ್ಲಿರುವಾಗಲೇ ಜಯಲಕ್ಷ್ಮೀ ಅವರು ಮೃತಪಟ್ಟಿದ್ದಾರೆ ಎಂದು ಆಶ್ರಮದವರು ಮಾಹಿತಿ ನೀಡಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



