Breaking
5 Aug 2026, Wed

ಬಸ್ ಪ್ರಯಾಣದ ವೇಳೆ ಮಹಿಳೆಯ ಪರ್ಸ್ ಕಳವು

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ನಗ ಹಾಗೂ ನಗದು ಇರಿಸಿದ್ದ ಪರ್ಸ್ ಕಳವಾಗಿರುವ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿಯಾದ ಕ್ರಿಸ್ತಿನ್ ವೇಗಸ್ ಅವರು ಗಂಡನೊಂದಿಗೆ ಉಜಿರೆಯಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ತೆರಳಿ ಬಸ್‌ನಲ್ಲಿ ವಾಪಸ್ ಮಂಗಳೂರು ಕಡೆಗೆ ಬರುವಾಗ ಈ ಘಟನೆ ಸಂಭವಿಸಿದೆ.

ಮಹಿಳೆ ಬಿ.ಸಿ.ರೋಡಿನಲ್ಲಿ ಬಸ್ ಇಳಿದು ಪರಿಶೀಲಿಸಿದಾಗ ಪರ್ಸ್‌ ಕಳವಾಗಿರುವುದು ಬೆಳಕಿಗೆ ಬಂದಿದೆ. ಪರ್ಸ್‌ ನಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ ಹಾಗೂ ನಗದು ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *