Breaking
19 Sep 2026, Sat

ಆಟೋದಲ್ಲಿ ಮರೆತು ಬಿಟ್ಟ ಚಿನ್ನದ ಬ್ಯಾಗ್: ಕೆಲವೇ ಗಂಟೆಗಳಲ್ಲಿ ಕಾವೂರು ಪೊಲೀಸರಿಂದ ಪತ್ತೆ

ಮಂಗಳೂರು: ಆಟೋರಿಕ್ಷಾದಲ್ಲಿ ಮಹಿಳೆಯೊಬ್ಬರು ಚಿನ್ನಾಭರಣವಿದ್ದ ಬ್ಯಾಗ್‌ನ್ನು ಮರೆತು ಬಿಟ್ಟು ಹೋಗಿದ್ದ ಘಟನೆ ನಡೆದಿದ್ದು, ಅದನ್ನು ಕೆಲವೇ ಗಂಟೆಗಳಲ್ಲಿ ಮಂಗಳೂರು ಕಾವೂರು ಪೊಲೀಸರು ಪತ್ತೆಹಚ್ಚಿ ಹಿಂತಿರುಗಿಸಿದ್ದಾರೆ.

ಕುಂಜತ್ತಬೈಲು ನಿವಾಸಿ ರೇಖಾ ತಾಜವ್ ಅವರು ಮನೆಗೆ ಆಟೋದಲ್ಲಿ ತೆರಳುವ ವೇಳೆ 4 ಚಿನ್ನದ ಉಂಗುರಗಳು, 1 ಚಿನ್ನದ ಪೆಂಡೆಂಟ್ ಹಾಗೂ 2 ವಾಚ್‌ಗಳಿದ್ದ ಬ್ಯಾಗ್‌ನ್ನು ರಿಕ್ಷಾದಲ್ಲೇ ಮರೆತು ಹೋಗಿದ್ದರು. ನಂತರ ಗಮನಿಸಿದಾಗ ಆಟೋರಿಕ್ಷಾ ಹಿಂದಿರುಗಿ ಹೋಗಿತ್ತು.

ದಿಕ್ಕು ಕಾಣದೆ ಮಹಿಳೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆಟೋರಿಕ್ಷಾದ ಸಂಖ್ಯೆಯನ್ನು ಪತ್ತೆಹಚ್ಚಿ, ಅದರ ಆಧಾರದ ಮೇಲೆ ಚಿನ್ನಾಭರಣವಿದ್ದ ಬ್ಯಾಗ್‌ನ್ನು ಸುರಕ್ಷಿತವಾಗಿ ವಾಪಸು ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *