Breaking
8 Apr 2026, Wed

ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ

ಕಲ್ಲಡ್ಕ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಮಜಿವಿ ವೀರಕಂಭ ಇಲ್ಲಿನ ಪೂರ್ವ ಪ್ರಾಥಮಿಕ( ಯುಕೆಜಿ ) ತರಗತಿ ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ ಏ. 7 ರಂದು ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಸಿಂಗೇರಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ರೊಟೇರಿಯನ್ ಗಣೇಶ್ ಶೆಟ್ಟಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಪದವಿ ಅನ್ನುವ ಪರಿಕಲ್ಪನೆಯನ್ನು ಕಲ್ಪಿಸಿ ಮಕ್ಕಳಿಗೆ ಕಲಿಕೆಯ ಪ್ರೋತ್ಸಾಹಿಸಲು ಉತ್ತಮವಾದ ಕಾರ್ಯಕ್ರಮವಾಗಿದ್ದು, ಮಕ್ಕಳ ಪೋಷಕರು ಶಾಲೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ ಶಾಲೆಯ ಶೈಕ್ಷಣಿಕ ಬೆಳವಣಿಗೆ ಜೊತೆಗೆ ಪೋಷಕರ ಮತ್ತು ಶಿಕ್ಷಕರ ನಡುವಿನ ಸಂಬಂಧವು ಹೆಚ್ಚು ಪರಿಣಾಮವನ್ನು ಉಂಟುಮಾಡುತ್ತದೆ,ಎಂದರು. ಹಾಗೂ ಶಾಲೆಗೆ ಅಗತ್ಯವಿದ್ದ ಒಂದು ಸ್ಮಾರ್ಟ್ ಟಿವಿ ಹಾಗೂ ಶಾಲಾ ಆವರಣ ಗೋಡೆ ನಿರ್ಮಿಸಲು ಸಹಕರಿಸುದಾಗಿ ತಿಳಿಸಿದರು.

ಶಾಲೆಗೆ 10 ವರುಷಗಳಿಂದ ಉಚಿತ ತರಕಾರಿ ನೀಡುತ್ತಿರುವ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ನ ಮೊಹಮ್ಮದ್ ಶರೀಫ್ ಮಾತನಾಡಿ ಆಟದ ಮೂಲಕ ಪಾಠವನ್ನು ಕಲಿತಾಗ ಕಲಿಕೆಯು ಹೆಚ್ಚು ಸುಲಭ ಮತ್ತು ಆಸಕ್ತಿದಾಯಕ ಆಗಿರುತ್ತದೆ, ಪೂರ್ವ ಪ್ರಾಥಮಿಕ ತರಗತಿಗಳಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಕೆಜಿ ಮಕ್ಕಳಿಂದ 2025- 26ನೇ ಸಾಲಿನ ಕಲಿಕಾ ಚಟುವಟಿಕೆಗಳ ಪ್ರದರ್ಶನ ಜರಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಜಿ ಶಾಲಾ ನಿವೃತ, ಹಿರಿಯ ಶಿಕ್ಷಕಿ ಶಕುಂತಲಾ ಎಂ ಬಿ, ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಮಕ್ಕಳ ಪೋಷಕರು ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮೆಂಡೋನ್ಸಾ ಸ್ವಾಗತಿಸಿದರು ಸಹ ಶಿಕ್ಷಕ ತೌಸೀಫ್ ಅಹಮದ್ ವಂದಿಸಿದರು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿಯರುಗಳಾದ ಪಲ್ಲವಿ ಹಾಗೂ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

ಸಂಗೀತ ಶರ್ಮ, ಹರಿಣಾಕ್ಷಿ, ಜಯಲಕ್ಷ್ಮಿ, ಇಂದುಶೇಖರ್ ಸಹಕರಿಸಿದರು.

Leave a Reply

Your email address will not be published. Required fields are marked *