Breaking
19 Sep 2026, Sat

ಆಟೋ ಚಾಲಕ ನಾಪತ್ತೆ: ದೂರು ದಾಖಲು

ಬಂಟ್ವಾಳ: ಆಟೋ ಚಾಲಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವನನ್ನು ವಗ್ಗ ಸಮೀಪದ ಕಾಡಬೆಟ್ಟು ಗ್ರಾಮದ ಕೆಳಗಿನ ವಗ್ಗ ನಿವಾಸಿಯಾಗಿರುವ ಮಹಮ್ಮದ್ ರಾಯಿಬ್( 21) ಎಂದು ಗುರುತಿಸಲಾಗಿದೆ.

ವಿವಾಹಿತನಾಗಿರುವ ರಾಯಿಬ್ ಅವರು ತಂದೆಯ ಮನೆಯ ಸಮೀಪದಲ್ಲೇ ವಾಸವಾಗಿದ್ದು, ಪ್ರತಿದಿನ ರಾತ್ರಿ ಮಲಗಲು ತಂದೆಯ ಮನೆಗೆ ಹೋಗುತ್ತಿದ್ದನು. ಏ. 1 ರಂದು ಸಹ ತಂದೆಯ ಮನೆಯಲ್ಲಿ ಮಲಗಿದ್ದರೂ, ಮರು ದಿನ ಬೆಳಿಗ್ಗೆ ಕಾಣೆಯಾಗಿರುವುದು ತಿಳಿದುಬಂದಿದೆ.

ಈ ಕುರಿತು ಆತನ ತಂದೆ ಅಬ್ದುಲ್ ಲತೀಫ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *