Breaking
21 Jun 2026, Sun

ಡಾ. ಹೇಮಾವತಿ ವಿ ಹೆಗ್ಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಿಗೆ ಹಣ್ಣುಹಂಪಲು ವಿತರಣೆ

ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ವಾಸ್ತಲ್ಯ ಮಾಶಾಸನ ಪಡೆಯುತ್ತಿರುವ 62 ಫಲಾನುಭವಿ ಕುಟುಂಬಗಳಿಗೆ ಡಾ. ಹೇಮಾವತಿ ಹೆಗ್ಡೆಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ವಿಟ್ಲ ವಲಯದಲ್ಲಿ ಮಾಶಾಸನ ಪಡೆಯುವ ವಾತ್ಸಲ್ಯ ಸದಸ್ಯರಾದ ಪಾರ್ವತಿ, ವಿಮಲಾ, ಗೌರಿಯವರಿಗೆ ಹಣ್ಣು ಹಂಪಲು ನೀಡಿ ಯೋಗ ಕ್ಷೇಮವನ್ನು ವಿಚಾರಿಸಿದ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ -2 ರ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್ ಗೌಡ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ, ಸೇವಾಪ್ರತಿನಿಧಿ ಬಿಂದುರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *