Breaking
17 May 2026, Sun

12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸ್ ಗ್ರೌಂಡ್ ಕಟ್ಟಡದ 12ನೇ ಮಹಡಿಯಿಂದ ವಿದ್ಯಾರ್ಥಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸಾರ್ಥಕ್‌ ಎಂದು ಗುರುತಿಸಲಾಗಿದೆ.

ಸಾರ್ಥಕ್‌ ಅವರು ಅತ್ತಾವರದ ಕಾಸ್ ಗ್ರೌಂಡ್ ಕಟ್ಟಡದಲ್ಲಿರುವ ತನ್ನ ಗೆಳೆಯನನ್ನು ಭೇಟಿಯಾಗಲು ಬಂದಿದ್ದರು. ಕಟ್ಟಡದ ಭದ್ರತಾ ಸಿಬ್ಬಂದಿಯ ಬಳಿ ಸಹಿ ಮಾಡಿ 12ನೇ ಮಹಡಿಗೆ ತೆರಳಿದ ಅವರು ಮೊಬೈಲ್ ಫೋನ್ ಅನ್ನು ಕೆಳಗೆ ಇಟ್ಟು, ಮೇಲ್ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *