Breaking
31 Mar 2026, Tue

ಭರತನಾಟ್ಯ ಕಲಾವಿದೆ ಆತ್ಮಿ ಶೆಟ್ಟಿ: ಏ.4ರಂದು ಭರತನಾಟ್ಯ ರಂಗಪ್ರವೇಶ

ಬಂಟ್ವಾಳ: ಕಲ್ಲಡ್ಕ ಕಲಾ ನಿಕೇತನ ಡ್ಯಾನ್ಸ್ ಫೌಂಡೇಶನ್ ವತಿಯಿಂದ ಕಳೆದ 12 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿರುವ ಕಲಾವಿದೆ ಆತ್ಮಿ ಶೆಟ್ಟಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಏ.4 ರಂದು ಸಂಜೆ 5.15 ಗಂಟೆಗೆ ನಡೆಯಲಿದೆ ಎಂದು ನೃತ್ಯಗುರು ವಿದ್ಯಾ ಮನೋಜ್ ತಿಳಿಸಿದ್ದಾರೆ.

ಮಾ. 30 ರಂದು ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಕೆ ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮ ಪ್ರದರ್ಶಿಸಿದ್ದು, ವಿದ್ವತ್ ಅಂತಿಮ ಪರೀಕ್ಷೆ ಸಿದ್ಧತೆಯಲ್ಲಿದ್ದಾರೆ. ಅಂದು ನಡೆಯುವ ರಂಗಪ್ರವೇಶ ಕಾರ್ಯಕ್ರಮದಲ್ಲಿ ಹಿಮ್ಮೇಲ ಕಲಾವಿದರಾಗಿ ನಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್ ಸಹಿತ ಹಾಡುಗಾರಿಕೆಯಲ್ಲಿ ವಿದ್ವಾನ್ ನಂದಕುಮಾರ್, ಉನ್ನಿಕೃಷ್ಣನ್ ಬೆಂಗಳೂರು, ಮೃದಂಗವಾದನದಲ್ಲಿ ವಿದ್ವಾನ್ ಕಾರ್ತಿಕ್ ವೈದಾತ್ರಿ, ಕೊಳಲುವಾದನದಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ, ವೀಣಾ ವಾದನದಲ್ಲಿ ವಿದ್ವಾನ್ ಗೋಪಾಲ ವೆಂಕಟರಮಣ ಭಾಗವಹಿಸುವರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದೆ ತಂದೆ ಉದಯ ಶೆಟ್ಟಿ, ತಾಯಿ ಶಾಲಿನಿ ಯು.ಶೆಟ್ಟಿ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *