Breaking
19 Sep 2026, Sat

ಬಬ್ಬರಬೈಲು ದೈವಸ್ಥಾನದಲ್ಲಿ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ

ಬಂಟ್ವಾಳ: ತಾಲೂಕಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ಮಾ. 28 ರಂದು ನೆರವೇರಿತು.

ಕಡಲತೀರದ ಸಂಪ್ರದಾಯದಂತೆ ಸ್ಥಳೀಯ ತೀರ್ಥ ಕೆರೆಗೆ ದೈವವು ತೆರಳಿ ‘ಗಂಗಾ ಭೇಟಿ ‘ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಪರಿವಾರ ದೈವ ಅಣ್ಣಪ್ಪ ಪಂಜುರ್ಲಿ ನೇಮ ಮತ್ತು ಗುಳಿಗ ಹಾಗೂ ಕೊರಗಜ್ಜ ದೈವದ ಕೋಲ ಸೇವೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕ ಹರೀಶ್ ಭಟ್ ಅರಳ, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಹರ್ಷೇಂದ್ರ ಹೆಗ್ಡೆ, ಆರ್. ಚೆನ್ನಪ್ಪ ಕೋಟ್ಯಾನ್, ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು, ಎಂ. ಪದ್ಮರಾಜ ಬಲ್ಲಾಳ್ ಮಾವಂತೂರು, ಪ್ರಕಾಶ್ ಜೈನ್, ಶೇಖರ ಅಂಚನ್ ಪಿಲ್ಕಾಜೆಗುತ್ತು, ಉಮೇಶ ಸಪಲ್ಯ ಗೋವಿಂದ ಬೆಟ್ಟು, ಬಿ.ಹರಿಶ್ಚಂದ್ರ ಶೆಟ್ಟಿ, ಗಂಗಾಧರ್ ಪಿಲ್ಕಾಜೆ, ಜಯಂತ ಪಿಲ್ಕಾಜೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *