Breaking
18 May 2026, Mon

ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಕೋಲ ಮಹೋತ್ಸವ ಸಂಪನ್ನ

ಬಂಟ್ವಾಳ: ಇಡೀ ಪಡುಪು ಸಜೀಪ ಮಾಗಣೆ ವ್ಯಾಪ್ತಿಯ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಾರ್ಷಿಕ ಕೋಲವು ಭಕ್ತಿಭಾವದಿಂದ ಜರುಗಿತು.

ಈ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಪುಣ್ಯಾಹ, ಪಂಚಗವ್ಯ, ಆದ್ಯ ಗಣಯಾಗ, ನವಕಲಶಾಭಿಷೇಕ, ಪರ್ವ ಸೇವೆ, ಶ್ರೀ ಸತ್ಯನಾರಾಯಣ ವ್ರತಕಥೆ ಪೂಜೆ ಹಾಗೂ ಪಲ್ಲ ಪೂಜೆಗಳು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತದಾರ ಸದಾಶಿವ ಶೇಖ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ರಾಧಾಕೃಷ್ಣ ಆಳ್ವ, ಪ್ರವೀಣ್ ಶೆಟ್ಟಿ, ಸೋಮನಾಥ, ಮನೋರಂಜನ್ ಶೇಖ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ ಪ್ರದರ್ಶನಗೊಂಡಿತು. ಅನ್ನದಾನದೊಂದಿಗೆ ವಾರ್ಷಿಕ ಕೋಲ ಮಹೋತ್ಸವವು ಸಮರ್ಪಕವಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *