ಕಾಸರಗೋಡು: ಬದಿಯಡ್ಕ ಸಮೀಪದ ನವಕಾನ ಎಂಬಲ್ಲಿ ಓಮ್ನಿ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ವಿದ್ಯಾಗಿರಿ ಬಜೆಯ ಸತ್ಯನಾರಾಯಣ ಭಟ್ ( 69) ಎಂದು ಗುರುತಿಸಲಾಗಿದೆ.

ಆಸ್ಪತ್ರೆಗೆ ತಪಾಸಣೆಗೆ ಎಂದು ತೆರಳುತ್ತಿದ್ದ ವೇಳೆ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಹೊಂಡಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ಚಾಲಕ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.








