Breaking
25 Mar 2026, Wed

ವಿಟ್ಲ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಿಪ್ಪರ್‌ ಮುಖಾಮುಖಿ ಡಿಕ್ಕಿ: ಚಾಲಕರ ನಡುವೆ ಹೊಡೆದಾಟ, ಕಂಡಕ್ಟರ್‌ಗೆ ಗಾಯ

ವಿಟ್ಲ: ಮುಚ್ಚಿರಪದವು ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಿಪ್ಪರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.

ಪೆರುವಾಯಿ ಕಡೆಗೆ ಸಾಗುತ್ತಿದ್ದ ಟಿಪ್ಪರ್‌ ಮತ್ತು ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಬಸ್‌ ಚಾಲಕ ಹಾಗೂ ಟಿಪ್ಪರ್‌ ಚಾಲಕರ ನಡುವೆ ವಾಗ್ವಾದ ಉಂಟಾಗಿ, ಬಳಿಕ ಹೊಡೆದಾಟ ನಡೆದಿರುವುದಾಗಿ ತಿಳಿದುಬಂದಿದೆ.

ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್‌ ಪ್ರಶಾಂತ್ ಗಾಯಗೊಂಡಿದ್ದು, ಅವರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *