Breaking
13 Mar 2026, Fri

ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು: ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಾಜಸ್ಥಾನದ ಜೋಧಪುರ ನಿವಾಸಿ ಮುಖೇಶ್ ದಾಸ್ (46) ಎಂದು ಗುರುತಿಸಲಾಗಿದೆ.

ಫೆ. 14, 2025 ರಂದು ರಾತ್ರಿ ಹೊಸಬೆಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ‘ಫ್ರೆಂಡ್ಸ್ ಗ್ಯಾರೇಜ್’ಗೆ ಲಾರಿ ಚಾಲಕನೊಬ್ಬ ಬಂದು ತನ್ನ ವಾಹನವನ್ನು ನಿಲ್ಲಿಸಿದ್ದ. ಬಳಿಕ ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಎರಡು ಭಾರೀ ವಾಹನಗಳ ಬಿಡಿಭಾಗಗಳನ್ನು ಕದ್ದು ತನ್ನ ಲಾರಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಗ್ಯಾರೇಜ್ ಮಾಲಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿತನಿಂದ ₹96,000 ಮೌಲ್ಯದ ವಾಹನ ಬಿಡಿಭಾಗಗಳು ಹಾಗೂ ಅಪರಾಧಕ್ಕೆ ಬಳಸಲಾದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *