Breaking
28 Feb 2026, Sat

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಬೂಟ್ಟೆಲ್ಮಾರ್ ಇದರ ಅಭಿವೃದ್ಧಿಗಾಗಿ ರೂ.1 ಲಕ್ಷ ಅನುದಾನ

ಧರ್ಮಸ್ಥಳ: ಬಳೆಂಜ ವಲಯದ ಕರಂಬಾರು ಗ್ರಾಮದ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್, ಬೂಟ್ಟೆಲ್ಮಾರ್ ಇದರ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಖಾವಂದರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ರೂ. 1.00 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.

ಈ ಅನುದಾನವನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಟ್ರಸ್ಟ್ ಅಧ್ಯಕ್ಷರಾದ ಪ್ರಸನ್ನ ಹೆಗ್ಗಡೆಯವರಿಗೆ ಡಿ.ಡಿ. ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಹೆಗ್ಡೆ, ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೌರವಾಧ್ಯಕ್ಷರಾದ ನವೀನ್ ಸಾಮಾನಿ, ವಲಯದ ಮೇಲ್ವಿಚಾರಕಿ, ಸೇವಾ ಪ್ರತಿನಿಧಿ ಹಾಗೂ ಒಕ್ಕೂಟದ ಅಧ್ಯಕ್ಷರಾದ ಸದಾಶಿವ ಉಪಸ್ಥಿತರಿದ್ದರು.

    Leave a Reply

    Your email address will not be published. Required fields are marked *