ಮೈಸೂರು: ಸರ್ವಕಲ ಸೇವಾ ಟ್ರಸ್ಟ್ (ರಿ.) ಹಾಗೂ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಪ್ತಸ್ವರ ಕರೋಕೆ ಗಾಯನ ಸೀಸನ್–3 ಪೋಸ್ಟರ್‌ನ್ನು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸನ್ ಗುರುಗಳು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಹಾರೈಸಿ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಶೀರ್ವಾದ ಸದಾ ಕಾರ್ಯಕ್ರಮದ ಮೇಲೆ ಇರಲಿ ಎಂದರು. ಹೊಸ ಗಾಯಕ-ಗಾಯಕಿಯರು ಶೀಘ್ರದಲ್ಲೇ ನೋಂದಣಿ ಮಾಡಿಕೊಂಡು ಈ ವೇದಿಕೆಯನ್ನು ತಮ್ಮದಾಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದನಪಾಲ್ ಜೆ. ಗೌಡ, ಸಮೃದ್ಧಿ ಟ್ರಸ್ಟ್ ಅಧ್ಯಕ್ಷ ಸಹನ ಗೌಡ, PGRSS ಖಜಾಂಚಿ ಮಂಜುಳಾ, ಸಮರ್ಪಣೆ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಮಂಗಳೂರು ಮೀನಾನಾಥ್, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಜನಪ್ರಿಯ ಶಾಸಕ ಜಿ.ಟಿ. ದೇವೇಗೌಡ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಅಧ್ಯಕ್ಷ ಡಾ. ನಾಗರಾಜು ವಿ. ಬೈರಿ, ಚಂದ್ರಶೇಖರ್ ರಾವ್ ಟ್ರಸ್ಟ್ ಮುಂಬೈ ಅಧ್ಯಕ್ಷೆ ಶ್ರೀದೇವಿ ರಾವ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಆಯೋಜಕರಾಗಿ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷ ನೀಮ ಲೋಬೊ, ಕಾರ್ಯದರ್ಶಿ ಜೋಸೆಫ್ ಲೋಬೊ ಹಾಗೂ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷ ಯಾದವ್ ಹರೀಶ್ ಮತ್ತು ರಾಜ್ಯ ಸಂಚಾಲಕ ರಕ್ತದಾನಿ ಮಂಜು ಕಾರ್ಯನಿರ್ವಹಿಸುತ್ತಿದ್ದಾರೆ.







