Breaking
21 Jun 2026, Sun

ಮೂಡೂರು–ಪಡೂರು ಜೋಡುಕರೆ ಕಂಬಳ: ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಮೂಡೂರು–ಪಡೂರು ಕೊಡುಕೆರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು (ಫೆ. 26) ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

15ನೇ ವರ್ಷದ ಹೊನಲು ಬೆಳಕಿನ ಮೂಡೂರು–ಪಡೂರು ಜೋಡುಕರೆ ಕಂಬಳವು ಮಾ. 7ರಂದು ನಾವೂರು ಕೂಡಿಬೈಲ್, ಬಂಟ್ವಾಳದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಗೌರವಾಧ್ಯಕ್ಷರಾದ ಶ್ರೀ.ಬಿ. ರಾಮನಾಥ ರೈ ಅವರ ಸಮ್ಮುಖದಲ್ಲಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಗೌರವಾಧ್ಯಕ್ಷ ಶ್ರೀ.ಬಿ. ರಾಮನಾಥ್ ರೈ ಅವರು ಮೂಡೂರು–ಪಡೂರು ಜೋಡುಕರೆ ಕಂಬಳ ಕುರಿತು ಮಾಹಿತಿ ನೀಡಿ, “ನಮ್ಮ ಕಂಬಳಕ್ಕೆ ಸರಿಸಾಟಿಯಾದ ಕಂಬಳ ಮತ್ತೊಂದಿಲ್ಲ” ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಚಂದ್ರ ಪ್ರಕಾಶ್ ಶೆಟ್ಟಿ, ಸಂಚಾಲಕರಾದ ಬಿ. ಪದ್ಮಶೇಖರ್ ಜೈನ್, ಅಧ್ಯಕ್ಷರಾದ ಶ್ರೀ ಪಿಯೂಸ್ ಎಲ್. ರೊಡ್ರಿಗಸ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ಬೇಬಿ ಕುಂದರ್, ಇಬ್ರಾಹಿಂ ನವಾಜ್, ಸುದರ್ಶನ್ ಜೈನ್, ಚಂದ್ರಶೇಖರ್ ಭಂಡಾರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *