Breaking
26 Feb 2026, Thu

ಗ್ರಾಮದ ದೈವ ಸಾನಿಧ್ಯಗಳು ಗಟ್ಟಿ ಆಗಬೇಕಾದರೆ ಭಕ್ತಿ ಶ್ರದ್ಧೆ ನಿಷ್ಠೆ ಮುಖ್ಯ.. ಕ್ಯಾಪ್ಟನ್ ಬ್ರಿಜೇಶ್ ಚೌಟ

ಕಲ್ಲಡ್ಕ : ಗ್ರಾಮದ ದೈವ ಸಾನಿಧ್ಯಗಳು ಗಟ್ಟಿ ಆಗಬೇಕಾದರೆ ಭಕ್ತಿ ಶ್ರದ್ಧೆ ನಿಷ್ಠೆ ಮುಖ್ಯ ಜೊತೆಗೆ ದೇವತಾ ಕಾರ್ಯಗಳಿಗೆ ಸೀಮಿತವಾಗದೆ ಗ್ರಾಮದಲ್ಲಿರುವ ಅಸಕ್ತ ಹಿಂದೂಗಳ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲೂ ಪ್ರಯತ್ನಿಸಬೇಕು ಎಂದು ಮಂಗಳೂರು ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಅವರು ಫೆಬ್ರವರಿ 25 ಬುಧವಾರ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಸಂಕೋಡಿ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಸಾನಿಧ್ಯ ಪುನರ್ ಪ್ರತಿಷ್ಠೆ ಬ್ರಹ್ಮ ಕಳಶಾಭಿಷೇಕ ಮತ್ತು ಯಕ್ಷಗಾನ ಬಯಲಾಟದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗ ಬ್ರಹ್ಮ ರಕ್ತೇಶ್ವರಿ ಸಾನಿಧ್ಯದ ಸಮಿತಿ ಅಧ್ಯಕ್ಷೆ ಶ್ರೀಮತಿ ಸೀತಾರಾಮಚಂದ್ರ ಆಚಾರ್ಯ ದಂಡೆಮಾರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಗಳು, ಸೀತಾರಾಮ ಅಡ್ಯಾನಂತಾಯ ಬೋಳಂತೂರು ಗುತ್ತು, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಕೀಲ ಶ್ರೀಧರ್ ಶೆಟ್ಟಿ ಪುಳಿಂಚ, ಬಜಾರ್ ಗ್ರೂಪ್ ಮಾಲಕ ಸುಧಾಕರ್ ಆಚಾರ್ಯ ಮಾರ್ನಬೈಲ್, ಕಲ್ಲಡ್ಕ ಗೇರುಕಟ್ಟೆ ಉಮಾಶಿವ ಕ್ಷೇತ್ರ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ, ರಾಮಚಂದ್ರ ಆಚಾರ್ಯ ದಂಡೆಮಾರು ನಾರಾಯಣ ಸಫಲ್ಯ ಸಂಕೋಡಿ, ಮಂಚಿಗುತ್ತು ಗಡಿ ಕಾರರಾದ ರವಿ, ದೈವನರ್ಥಕ ಕಾಂತಣ್ಣ ಕಾಂತಾಡಿ, ಹರೀಶ್ ಸಫಲ್ಯ ಸಂಕೋಡಿ, ಶ್ರೀಕಾಂತ್ ಭಟ್, ಸೂರ್ಯಕಾಂತ ಆಚಾರ್ಯ ದಂಡೆಮಾರು, ಚೇತನ್ ಸಫಲ್ಯ ಸಂಕೋಡಿ, ಪ್ರಮೋದ್ ಆಚಾರ್ಯ ದಂಡೆಮಾರು ಮೊದಲದವರು ಉಪಸ್ಥಿತರಿದ್ದರು.

ಬೆಳಿಗ್ಗೆ ಬಡಾಜೆಬಿಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ದಿವ್ಯ ಹಸ್ತದಿಂದ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ನಾಗ ಬ್ರಹ್ಮ ರಕ್ತೇಶ್ವರಿ ಸಾನಿಧ್ಯದ ಪುನರ್ ಪ್ರತಿಷ್ಠ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ ಜರಗಿತು. ನಂತರ ಭಜನ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಶ್ರೀಮತಿ ಸೀತಾರಾಮಚಂದ್ರ ಆಚಾರ್ಯ ದಂಡೆಮಾರು ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ಸೃಜನ್ಯ ಮತ್ತು ನಿವ್ಯ ಪ್ರಾರ್ಥಿಸಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯರಾಮ್ ರೈ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಆರನೇ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಿತು.

Leave a Reply

Your email address will not be published. Required fields are marked *