Breaking
19 Sep 2026, Sat

ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪೂಜೆ, ಭಜನೆ ಹಾಗೂ ಯಕ್ಷಗಾನ ತಾಳಮದ್ದಳೆ

ಬಂಟ್ವಾಳ: ಸಜೀಪ ಮುನ್ನೂರಿನ ಮಹಾಕಾಳಿ ಪಡ್ಪುವಿನ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಪುಣ್ಯಾಹ, ದ್ವಾದಶ ನಾಳಿಕೇರ ಗಣಯಾಗ, ದುರ್ಗಾ ಹೋಮ ಹಾಗೂ ಪ್ರಸನ್ನ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶರಬೇಶ್ವರ ಭಜನಾ ಮಂಡಳಿ ಬೊಕ್ಕಸ, ಶ್ರೀ ಶಾರದಾ ಭಜನಾ ಮಂದಿರ ಶಾರದಾ ನಗರ ಹಾಗೂ ಮುಗುಳಿಯ ಸುಬ್ರಹ್ಮಣ್ಯ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ಬಳಿಕ ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ.) ಮುಡಿಪು ಇವರ ವತಿಯಿಂದ ಪ್ರಶಾಂತ್ ಹೊಳ್ಳ ಅವರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ “ಮಾಗದ ವಧೆ” ಪ್ರದರ್ಶನಗೊಂಡಿತು.

ರಾತ್ರಿ ಶ್ರೀ ದೇವರಿಗೆ ರಂಗ ಪೂಜೆ ಹಾಗೂ ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

Leave a Reply

Your email address will not be published. Required fields are marked *