Breaking
21 Jun 2026, Sun

ಗೆಲ್ಲು ತುಂಡರಿಸುವ ವೇಳೆ ಬುಡ ಸಮೇತ ಉರುಳಿ ಬಿದ್ದ ಮರ : ವ್ಯಕ್ತಿ ಸಾವು

ಬೆಳ್ತಂಗಡಿ: ಗೆಲ್ಲು ತುಂಡರಿಸುವ ವೇಳೆ ಮರವೊಂದು ಬುಡ ಸಮೇತ ಉರುಳಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಫೆ. 24ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಶಿರ್ಲಾಲು ಗ್ರಾಮದ ನೇಮು (62)ಎಂದು ಗುರುತಿಸಲಾಗಿದೆ.

ಬಡಗಕಾರಂದೂರು ಗ್ರಾಮದ ಕಂಬಳದಡ್ದ ಖಾಸಗಿ ಜಮೀನಿನಲ್ಲಿ ಮರಕ್ಕೆ ಹತ್ತಿ ಮರದ ಗೆಲ್ಲನ್ನು ತುಂಡರಿಸುತ್ತಿದ್ದ ವೇಳೆ ಬುಡ ಸಮೇತ ಮರ ಉರುಳಿ ಬಿದ್ದು ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಬಿದ್ದು ಗಂಭೀರ ಗಾಯಗೊಂಡ ನೇಮು ಅವರನ್ನು ತಕ್ಷಣವೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *