ಕೊಣಾಜೆ: ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ಫೆ. 24 ರಂದು ನಡೆದಿದೆ.
ಮೃತರನ್ನು ಬೋಳಿಯಾರ್ ನಿವಾಸಿ ಬಿ.ಎಚ್. ಕರೀಂ ಅವರ ಪುತ್ರ ಮುಹಮ್ಮದ್ ರಿಝ್ವಾನ್ (28) ಎಂದು ಗುರುತಿಸಲಾಗಿದೆ.

ಮೀನಿನ ಲಾರಿಯ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಝ್ವಾನ್ ಅವರು ಮಹಾರಾಷ್ಟ್ರದ ರತ್ನಗಿರಿಗೆ ಮೀನನ್ನು ಸಾಗಿಸುತ್ತಿದ್ದ ವೇಳೆ, ರತ್ನಗಿರಿ ಸಮೀಪ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರಿಝ್ವಾನ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.








