Breaking
24 Feb 2026, Tue

ಕಾರಿನಲ್ಲಿ ವ್ಯಕ್ತಿಯೋರ್ವನನ್ನು ಅಪಹರಿಸಿದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮಂಜೇಶ್ವರ: ವ್ಯಕ್ತಿಯೋರ್ವನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪಾವೂರು ಕುಂಡಾಪುವಿನ ಗಫೂರ್ (29) , ಮಚ್ಚoಪಾಡಿಯ ಅಬೂಬಕ್ಕರ್ ಅನಾಸ್ (27), ಮುಹಮ್ಮದ್ ಶಿಹಾಬ್ (42) , ಬಂಟ್ವಾಳದ ಮುಹಮ್ಮದ್ ರಫೀಕ್ (27) ಎಂದು ಗುರುತಿಸಲಾಗಿದೆ.

ಫೆ. 20 ರಂದು ಪಾವೂರು ಕೊಂಬಗುಡಿಯ ಅಬ್ದುಲ್ ರಹಮಾನ್ ಅವರನ್ನು ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಅಪಹರಿಸಿತ್ತು. ಈ ಕುರಿತು ಪತ್ನಿ ತಾಹಿರಾ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳು ಅಬ್ದುಲ್ ರಹಮಾನ್ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಬಳಿಕ ಮರಳಿ ಕರೆದುಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಪಟ್ಟ ವಿಚಾರವೇ ಅಪಹರಣಕ್ಕೆ ಕಾರಣ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *