ಬಂಟ್ವಾಳ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಕುಕ್ಕಿಪಾಡಿಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕುಕ್ಕಿಪಾಡಿ ಗ್ರಾಮದ ಮಾಡಮೆ ನಿವಾಸಿ ಶ್ರೀರಾಮ ಆಚಾರ್ಯ ಅವರ ಪುತ್ರ ಪ್ರಶಾಂತ್ ಆಚಾರ್ಯ ( 24) ಎಂದು ಗುರುತಿಸಲಾಗಿದೆ.

ಫೆ.22 ರಂದು ಅರಂತಾಡಿ ಮನೆಯೊಂದರಲ್ಲಿ ಕೃಷಿ ಸಂಬಂಧಿತ ಕೆಲಸದಲ್ಲಿ ತೊಡಗಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.







