ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಕರ್ಪೆ ನಿವಾಸಿ ಸಂತೋಷ್ ಪೂಜಾರಿ ಅವರ ನಾಲ್ಕು ವರ್ಷದ ಪುತ್ರನು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದುವರೆಗೆ ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ 10 ರಿಂದ 15 ಲಕ್ಷ ರೂ. ಕ್ಕಿಂತಲೂ ಹೆಚ್ಚು ಅಗತ್ಯವಿರಬಹುದು ಎಂದು KMC Hospital Attavar ವೈದ್ಯರು ತಿಳಿಸಿದ್ದಾರೆ. ಇದರಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕಿದ್ದು, ಸಹಾಯಕ್ಕಾಗಿ ನಮ್ಮ ಸಂಸ್ಥೆಗೆ ಮನವಿ ಸಲ್ಲಿಸಿತ್ತು.

ಇವರ ಮನವಿಗೆ ಸ್ಪಂದಿಸಿ 20,000 ರೂ.ಗಳ ಸಹಾಯಧನದ ಚೆಕ್ ಅನ್ನು ಸಂಕಪ್ಪ ಪೂಜಾರಿ ದೇವರಗುಡ್ಡೆ ಅವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಕಾರ್ಯದರ್ಶಿ ದಯಾನಂದ ಮಿಜಾರ್, ಸೇವಾ ಮಾಣಿಕ್ಯರಾದ ಲೋಕೇಶ್ ಪೂಜಾರಿ ಇರುವೈಲ್, ಸುಜಿತ್ ದೇವಾಡಿಗ ಉರ್ಕಿ ಹಾಗೂ ನಾಗೇಶ್ ಪೂಜಾರಿ ಉಪಸ್ಥಿತರಿದ್ದರು.








