Breaking
19 Sep 2026, Sat

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ನಾಪತ್ತೆ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನೊಬ್ಬ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಬಾಲಕನನ್ನು ರಾಮನಗೌಡ ಎಂಬವರ ಪುತ್ರ ಶಿವನಗೌಡ (15) ಎಂದು ಗುರುತಿಸಲಾಗಿದೆ.

7ನೇ ತರಗತಿ ವ್ಯಾಸಂಗ ಮಾಡಿದ್ದ ಈತನಿಗೆ ಕಳೆದ ಐದು ವರ್ಷಗಳಿಂದ ಫಿಟ್ಸ್‌ (ಮೂರ್ಚೆ) ಹಾಗೂ ಮರೆವಿನ ಕಾಯಿಲೆ ಇರುವುದರಿಂದ ಬಳಿಕ ಶಾಲೆಗೆ ತೆರಳುತ್ತಿರಲಿಲ್ಲ. ಫೆ. 19ರಂದು ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಶಿವನಗೌಡ ಮನೆಯಲ್ಲಿ ಕಾಣೆಯಾಗಿದ್ದನು. ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗುವ ದಿನ ಶಿವನ ಗೌಡ ನೀಲಿ ಬಣ್ಣದ ಟಿ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದನು, ಗೋಧಿ ಮೈಬಣ್ಣ ಹೊಂದಿದ್ದಾನೆ. ಸಪೂರ ಶರೀರ ಹೊಂದಿದ್ದ ಈತ ಕನ್ನಡ ಭಾಷೆ ಮಾತನಾಡುತ್ತಾನೆ.

ಯಾವುದೇ ಮಾಹಿತಿ ಲಭ್ಯವಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0824-2220540 ಅಥವಾ 9480805560 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *