ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಂಟ್ವಾಳ ತಾಲೂಕು ಘಟಕದ ಮಕ್ಕಳ ಕಲಾ ಲೋಕದ 2026–27ನೇ ಸಾಲಿನ ಅಧ್ಯಕ್ಷರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ್ ಎಂ. ಬಾಯಾರು ಅವರು ಪುನರಾಯ್ಕೆಯಾಗಿದ್ದಾರೆ.
ಫೆಬ್ರವರಿ 21ರಂದು ವಿಟ್ಲ ಮಾದರಿ ಶಾಲೆಯಲ್ಲಿ ನಡೆದ ಮಕ್ಕಳ ಕಲಾ ಲೋಕದ ಮಹಾಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ರಮೇಶ್ ಎಂ. ಬಾಯಾರು ಅವರು ಲೇಖಕರು, ಭಾಷಣಕಾರರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿದ್ದು, ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಗಳ ಗೌರವ ಆಡಳಿತಾಧಿಕಾರಿಯೂ ಆಗಿದ್ದಾರೆ. ಉತ್ತಮ ಸಂಘಟಕರಾಗಿರುವುದನ್ನು ಇವರು ಹಿಂದಿನ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನಗಳ ಯಶಸ್ವಿ ಆಯೋಜನೆಯ ಮೂಲಕ ದೃಢಪಡಿಸಿದ್ದಾರೆ. ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಎಂ.ಕೆ ನಾಯ್ಕ್ ಅಡ್ಯನಡ್ಕ, ಕಾರ್ಯದರ್ಶಿ ಪುಷ್ಪಾ ಎಚ್. ಖಜಾಂಚಿಯಾಗಿ ಶ್ರೀಪತಿ ನಾಯಕ್ ನಾಟೆ ಕಲ್ಲು, ಜೊತೆ ಕಾರ್ಯದರ್ಶಿಯಾಗಿ ವಿಲ್ಮಾ ಸಿಕ್ವೇರಾ, ಸಂಘಟನಾ ಕಾರ್ಯದರ್ಶಿಯಾಗಿ ಭವಾನಿ ಮಾಣಿ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಶಿವರಾಮ ಭಟ್ ನೆಡ್ಲೆ, ವಿಶ್ವನಾಥ ಗೌಡ ಕುಳಾಲು, ಸಂಜೀವ ಮಿತ್ತಳಿಕೆ, ಇಸ್ಮಾಯಿಲ್ ಅಳಕೆಮಜಲು, ವಿಟ್ಲ, ರಾಜೇಶ ವಿಟ್ಲ, ಗೌರವ ಸಲಹೆಗಾರರಾಗಿ ಮಕ್ಕಳ ಕಲಾ ಲೋಕದ ಮಾಜಿ ಅಧ್ಯಕ್ಷರುಗಳಾದ ಅನಂತ ಕೃಷ್ಣ ಹೆಬ್ಬಾರ್, ಭಾಸ್ಕರ ಅಡ್ವಳ ಮತ್ತು ಮಹಾಬಲ ಭಟ್ ನೆಗಳಗುಳಿ, ಮಾಧ್ಯಮ ಪ್ರತಿನಿಧಿಯಾಗಿ ಚಿನ್ನಾ ಕಲ್ಲಡ್ಕ ಆಯ್ಕೆಯಾಗಿದ್ದಾರೆ.






