Breaking
21 Jun 2026, Sun

ಮನೆಯಂಗಳದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟರ್ ಬೆಂಕಿಗಾಹುತಿ

ಉಡುಪಿ: ಮನೆಯಂಗಳದಲ್ಲಿ ಇರಿಸಿದ್ದ ಸ್ಕೂಟರ್‌ ಬೆಂಕಿಗಾಹುತಿಯಾದ ಘಟನೆ ಶಿರ್ವ ಸಮೀಪದ ಪಂಜಿಮಾರು ಪಾಲಮೆಯಲ್ಲಿ ನಡೆದಿದೆ.

ಇತ್ತೀಚಿಗಷ್ಟೇ ಪಾಲಮೆಯ ನಿವಾಸಿಯೊಬ್ಬರು ಸ್ಕೂಟರ್ ಖರೀದಿಸಿದ್ದರು. ಮಧ್ಯಾಹ್ನ ಅದನ್ನು ಮನೆಯ ಅಂಗಳದಲ್ಲಿ ಪಾರ್ಕ್ ಮಾಡಲಾಗಿತ್ತು. ಅಷ್ಟರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸೆಕೆಂಡುಗಳಲ್ಲಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *