Breaking
22 Apr 2026, Wed

ಬೋಳಾರ ಮುಳಿಹಿತ್ಲು ನೇತ್ರಾವತಿ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮಂಗಳೂರು: ಬೋಳಾರ ಮುಳಿಹಿತ್ಲು  ಬಳಿಯ ನೇತ್ರಾವತಿ ನದಿ ದಡದಲ್ಲಿ  ಅಪರಿಚಿತ ವ್ಯಕ್ತಿಯ ಶವವು  ಪತ್ತೆಯಾದ ಘಟನೆ ನಡೆದಿದೆ.  

ಮೃತ ವ್ಯಕ್ತಿಯು  ಸುಮಾರು 45 ರಿಂದ 50 ವರ್ಷದವರಾಗಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋಧಿ ಮೈ ಬಣ್ಣ ದುಂಡು ಮುಖ, ಸುಮಾರು 5.5 ಅಡಿ ಎತ್ತರ, ಹೊಟ್ಟೆಯ ಕೆಳಭಾಗ ಮತ್ತು ಕಂಕುಳಲ್ಲಿ ನರುಳ್ಳಿ (ಕೆಡು) ಇದೆ. ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಪಾದದ ಚಿತ್ರವಿರುವ ಕಣಿಸರ, ಎಡಕೈಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ 5 ಇಂಚು ಉದ್ದದ ಹಳೆಯ ಗಾಯದ ಗುರುತು ಇದೆ. 

ಘಟನಾ ಸ್ಥಳಕ್ಕೆ ಪಾಂಡೇಶ್ವರ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *