Breaking
27 Apr 2026, Mon

ಗೂಗಲ್‌ ಮ್ಯಾಪ್‌ ಎಡವಟ್ಟು: ಹೊಳೆ ಬಳಿ ಕಾರು ಡಿಕ್ಕಿ, ತಪ್ಪಿದ ಅನಾಹುತ

ಬ್ರಹ್ಮಾವರ : ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಕೋಟ ಸಾಹೇಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಫೆ.14 ರಂದು ನಡೆದಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕುಟುಂಬವೊಂದರ ಐದು ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆಯಲು ಕೊಲ್ಲೂರಿಗೆ ತೆರಳುತ್ತಿದ್ದ ವೇಳೆ ಗೂಗಲ್‌ ಮ್ಯಾಪ್‌ನಲ್ಲಿ ತೋರಿದ ಡೈವರ್ಶನ್‌ ಅನುಸರಿಸಿ ಬ್ರಹ್ಮಾವರ ಬಳಿಯ ಬಾರಕೂರು ಮಾರ್ಗವಾಗಿ ಸಾಹೇಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು. ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್‌ ಪಿಲ್ಲರ್‌ ಮೇಲೆ ಹತ್ತಿ ನಿಂತಿದೆ.

ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *