ಬಂಟ್ವಾಳ: ಮೆದುಳಿನ ರಕ್ತ ಸ್ರಾವದಿಂದ ಕೋಮಾದ ಪರಿಸ್ಥಿತಿಯಲ್ಲಿದ್ದ ತನ್ನ ಅವಿವಾಹಿತ ಮಗಳ ಅಂಗಾಂಗಗಳಾದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್ ಹಾಗೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಜೀವಗಳಿಗೆ ಜೀವದಾನ ನೀಡಿದ ಸಾರ್ಥಕತೆಯ, ತಾಯಿ ಹೃದಯದ ಶ್ರೀಮಂತಿಕೆಯ ಮಮತಾ ಶೆಟ್ಟಿಯವರ ಧೈರ್ಯದ ದಿಟ್ಟ ನಿರ್ಧಾರವು ಇತರ ತಾಯಂದಿರಿಗೆ ಮಾದರಿಯಾಗುವ ಹಿನ್ನೆಲೆಯಲ್ಲಿ ಇವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು ಸಂಘದ ಸಭಾಂಗಣದಲ್ಲಿ
ಆರ್ಥಿಕ ಸಹಾಯ ನೀಡಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸಂದೇಶ ಶೆಟ್ಟಿ, ನಿರ್ದೇಶಕರಾದ ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್,ಶಿವ ಗೌಡ, ವೀರಪ್ಪ ಪರವ, ಜಾರಪ್ಪ ನಾಯ್ಕ, ರಾಜೇಶ್ ಶೆಟ್ಟಿ ನವೀನ ಹೆಗ್ಡೆ,ಮಂದಾರತಿ ಶೆಟ್ಟಿ,ಪುಷ್ಪಳತಾ ಎಸ್. ಆರ್,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಮಮತಾ ಶೆಟ್ಟಿ ಸಹೋದರ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.




