Breaking
23 Mar 2026, Mon

ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆ

ಬಂಟ್ವಾಳ: ಸಜೀಪ ಮೂಡ ಈಶ್ವರ ಮಂಗಳದಲ್ಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಫೆ. 15ರಂದು ನಡೆಯುವ ಮಹಾ ಶಿವರಾತ್ರಿ ಪೂಜೋತ್ಸವ ಹಾಗೂ ಮಾ.11 ರಂದು ಜರಗುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಸಜೀಪ ಮಾರ್ಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ವಿಶ್ವನಾಥ ಬೆಲ್ಚಡ, ರಮೇಶ ಅನ್ನಪಾಡಿ, ಸುಕೇಶ, ದೇವದಾಸ, ಸುರೇಶ್ ಬಂಗೇರ, ಹರೀಶ್ ಬಂಗೇರ, ನಿತಿನ್ ಅರಸ, ಹರೀಶ್ ನಾಯಕ್, ಬಾಲಕೃಷ್ಣ , ಸುಧಾಕರ, ಪದ್ಮನಾಭ ಪೂಜಾರಿ, ಲಿಂಗಪ್ಪ ದೋಟ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *