Breaking
20 Sep 2026, Sun

ರಥಸಪ್ತಮಿ ಪ್ರಯುಕ್ತ ಸಜೀಪ ಮುನ್ನೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಬಂಟ್ವಾಳ: ಸಜೀಪ ಮುನ್ನೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆಯಲ್ಲಿ ರಥ ಸಪ್ತಮಿಯ ಪ್ರಯುಕ್ತ ನಡೆದ ಜೋಡು ರಂಗ ಪೂಜೆ ಸಂದರ್ಭದಲ್ಲಿ ರುದ್ರಪಠಣ ಸಮಿತಿ ಬಂಟ್ವಾಳ ವತಿಯಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಗಣಪತಿ ಸೂಕ್ತ, ವಿಷ್ಣು ಸೂಕ್ತ, ದುರ್ಗಾ ಸೂಕ್ತ, ಪುರುಷ ಸೂಕ್ತ, ಶ್ರೀ ಸೂಕ್ತ, ಐಕಮತ್ಯಸೂಕ್ತ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಕೇಶವ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಎ ರವಿ ಶಂಕರ ಮೈಯ್ಯ, ಎ ದನೇಶ್ವರ ರಾವ್, ಎನ್ ರಾಮಚಂದ್ರ ಮೈಯ್ಯ, ಎಂ ಶಾಂತ ರಾಮ ರಾವ್, ಎಂ ಜಯರಾಮ ಮೈಯ್ಯ, ವಿಶಾಲ ಹೆಗಡೆ, ಬಾಲಕೃಷ್ಣ ಕಾರಂತ, ಶ್ರೀನಿವಾಸ ಶಿವ ತಾಯ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶಾಂ, ಸಮಿತಿ ಸದಸ್ಯರಾದ ಪುರಂದರ , ಯಶವಂತ ಗಟ್ಟಿ, ಗೀತೇಶ ಗಟ್ಟಿ, ಸಂತೋಷ, ಪ್ರಮುಖರಾದ ಚಂದ್ರಶೇಖರ ಗಟ್ಟಿ, ಸೀತಾರಾಮ ಗಟ್ಟಿ, ವಾಸು ಗಟ್ಟಿ, ದಯಾನಂದ, ವಿಶ್ವನಾಥ ಬೆಳ್ಚಡ, ನರೇಂದ್ರ ಆಳ್ವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *