Breaking
23 Mar 2026, Mon

ದೆಹಲಿಯ ಗಣರಾಜ್ಯೋತ್ಸವ ಕರ್ತವ್ಯ ಪಥಕ್ಕೆ ಸಂಗಬೆಟ್ಟುವಿನ ಪ್ರೇಮ ಗೋಪಾಲ ಪೂಜಾರಿ ಆಯ್ಕೆ

ಬಂಟ್ವಾಳ: ದೆಹಲಿ ನಗರದಲ್ಲಿ ನಡೆಯಲಿರುವ 75ನೇ ಗಣರಾಜ್ಯೋತ್ಸವ ಆಚರಣೆಯ ಕರ್ತವ್ಯಪಥಕ್ಕೆ ಪ್ರೇಮ ಗೋಪಾಲ ಪೂಜಾರಿಯವರು ವಿಶೇಷ ಅತಿಥಿಯಾಗಿ ಆಯ್ಕೆಯಾಗಿದ್ದಾರೆ.

ಸಂಗಬೆಟ್ಟು ಗ್ರಾಮದ ಕಂಬಳ ದಡ್ಡ – ಮೆಲ್ ಗುಡ್ಡೆಯ ನಿವಾಸಿಯಾಗಿರುವ ಇವರು ಅಮೃತ ಸಂಜೀವಿನಿ ಒಕ್ಕೂಟದ, ಸ್ಥಳೀಯ ಸಮುದಾಯದ ಸಂಪನ್ಮೂಲ ವ್ಯಕ್ತಿಯಾಗಿದ್ದು, ಜನಸಾಮಾನ್ಯರ ಜೊತೆ ಬೆರೆತು ಬಡವರಿಗೆ ಸಹಾಯ ನೀಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ಅವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿವೆ.

Leave a Reply

Your email address will not be published. Required fields are marked *