ಬಂಟ್ವಾಳ: ಬಿ.ಸಿ.ರೋಡಿನ ಕೃಷಿಕ ಸಮಾಜ ಕಟ್ಟಡದ ನೆಲ ಅಂತಸ್ತಿನಲ್ಲಿ ಕರ್ನಾಟಕ ಸರಕಾರ ಕೃಷಿ ಇಲಾಖೆ ಪ್ರಾಯೋಜಿತ ರೈತ ಉತ್ಪಾದಕ ಕಂಪನಿ, ಬೊಲ್ಪು ರೈತ ಉತ್ಪಾದಕರ ಕಂಪನಿ ನಿಯಮಿತ ಬಂಟ್ವಾಳ ಇದರ ಕಛೇರಿ ಮಾರಾಟ ಮಳಿಗೆ ಜ. 23 ರಂದು ಶುಭಾರಂಭಗೊಂಡಿದೆ.
ಕರ್ನಾಟಕ ಸರ್ಕಾರದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಛೇರಿ ಉದ್ಘಾಟಿಸಿ, ದೀಪ ಪ್ರಜ್ವಲಿಸಿ ರೈತರಿಗೆ ಕೃಷಿ ಇಲಾಖೆ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ವಿವಿಧ ಸೌಲಭ್ಯಗಳು ಸುಲಭವಾಗಿ ಸಿಗಲಿ ಎಂದು ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ. ಪ್ರದೀಪ್ ಡಿಸೋಜ, ಸಂಸ್ಥೆ ನಿದೇಶಕರಾದ ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಅರ್ವೀನ್ ಡಿಸೋಜ ಲೊರೆಟ್ಟೊ, ಸೀತಾರಾಮ ಶೆಟ್ಟಿ ಸಜಿಪ, ಕೃಷ್ಣಪ್ಪ ಸಪಲ್ಯ ಅಂತರ, ವಿಜಯ ರೈ ಆಲದಪದವು, ಜಗದೀಶ ಭಂಡಾರಿ ಕುರ್ಯಾಳ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಕೆ.ಪದ್ಮನಾಭ ರೈ, ಸುಭಾಶ್ಚಂದ್ರ ಜೈನ್, ಉಮ್ಮರ ಮಂಚಿ, ಸಿಇಒ ಹರ್ಷಿತ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಸ್ಥೆ ಅಧ್ಯಕ್ಷ ರಾಜಾ ಬಂಟ್ವಾಳ್ ಸ್ವಾಗತಿಸಿ, ಕಾರ್ಯದರ್ಶಿ ಸದಾನಂದ ಶೆಟ್ಟಿ ರಂಗೋಲಿ ವಂದಿಸಿದರು.




