Breaking
23 Mar 2026, Mon

ಕಟ್ಟೆಮಾರ್ ಮಂತ್ರದೇವತೆ ನೇಮೋತ್ಸವದ ಸಂದರ್ಭದಲ್ಲಿ ತುಳು ಲಿಪಿ ನಾಮಫಲಕಕ್ಕೆ ಮನವಿ

ಬಂಟ್ವಾಳ: ಜೈ ತುಲುನಾಡ್ (ರಿ.) ಬಂಟ್ವಾಳ ಘಟಕದಿಂದ ಕಟ್ಟೆಮಾರ್ ಮಂತ್ರದೇವತೆ ಸಾನಿಧ್ಯದ ವಾರ್ಷಿಕ ಕೋಲದ ಸಂದರ್ಭದಲ್ಲಿ ತುಳು ಲಿಪಿ ನಾಮಫಲಕ ಹಾಕುವಂತೆ ಮನವಿ ಮಾಡಲಾಯಿತು.

ಶ್ರೀ ಮಂತ್ರದೇವತೆ ಮತ್ತು ಸಹಪರಿವಾರ ದೈವಗಳ ನೇಮೋತ್ಸವ ಜ.18 ರಿಂದ 19 ರವರೆಗೆ ನಡೆಯಿತು. ಈ ಸಂದರ್ಭದಲ್ಲಿ ಜನವರಿ 18 ರಂದು ಸಂಜೆ ಸನ್ಮಾನ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ತುಳುನಾಡಿನ ಮಾತೃಭಾಷೆ ಮತ್ತು ಲಿಪಿಯ ಇತಿಹಾಸವನ್ನು ಯುವ ಸಮುದಾಯಕ್ಕೆ ತಿಳಿಸುತ್ತಿರುವ ಜೈ ತುಲುನಾಡ್ (ರಿ.) ಸಂಘಟನೆಯು ಸುಮಾರು 30,000ಕ್ಕಿಂತ ಹೆಚ್ಚು ಜನರಿಗೆ ತುಳು ಲಿಪಿ ತರಗತಿಗಳ ಮಾಡುವುದರ ಮೂಲಕ ಅರಿವು ಮೂಡಿಸುತ್ತಿದೆ.

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮನೋಜ್ ಕಟ್ಟೆಮಾರ್ ಮೂಲಕ ಕಟ್ಟೆಮಾರ್ ಕ್ಷೇತ್ರದಲ್ಲಿ ತುಳು ಲಿಪಿ ನಾಮಫಲಕ ಸ್ಥಾಪನೆಗೆ ಮನವಿ ಸಲ್ಲಿಸಲಾಯಿತು.ಈ ಕಾರ್ಯಕ್ರಮದಲ್ಲಿ ಜೈ ತುಲುನಾಡ್ (ರಿ.) ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿಶೋರ್ ಪೂಜಾರಿ, ಜೈ ತುಲುನಾಡ್ (ರಿ.) ಸಂಘಟನೆಯ ಸಾಂಸ್ಕೃತಿಕ ಅಂಗಸಂಸ್ಥೆ ಸಂಘ ಲೇಲೇಲೇಗದ ಅಧ್ಯಕ್ಷೆ ಪೂರ್ಣಿಮಾ ಬಂಟ್ವಾಳ್, ಬಂಟ್ವಾಳ ಘಟಕದ ಉಪಾಧ್ಯಕ್ಷ ಪ್ರತೀಕ್ ತುಲುವೆ, ಜೊತೆ ಕಾರ್ಯದರ್ಶಿ ರಂಜಿತಾ, ಕೋಶಾಧಿಕಾರಿ ರಕ್ಷಾ, ಸಂಘಟನಾ ಕಾರ್ಯದರ್ಶಿ ತ್ರಿಷಾಲಿ, ಲೇಲೇಲೇಗಾ ಬಂಟ್ವಾಳದ ಮೇಲ್ವಿಚಾರಕ ಜನಾರ್ದನ್ ಪೆರ್ನೆ, ಸದಸ್ಯ ಧೀರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *