Breaking
24 Jun 2026, Wed

ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ವಂಚಿಸಿದ ಆರೋಪ: ನಾಲ್ವರ ವಿರುದ್ದ ಪ್ರಕರಣ ದಾಖಲು

ಮಂಗಳೂರು : ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 14.89 ಲಕ್ಷ ರೂ. ಸಾಲ ಪಡೆದು ವಂಚಿಸಿದ ಘಟನೆ ಕಾವೂರಿನಲ್ಲಿ ನಡೆದಿದೆ.

ವಂಚಿಸಿದ ಆರೋಪಿಗಳನ್ನು ಮುಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್, ದಿಲ್‌ಶಾದ್, ಸೈನಾಝ್ ಎಂದು ಗುರುತಿಸಲಾಗಿದೆ.

ನಕಲಿ ಚಿನ್ನವನ್ನು ಅಡವಿಟ್ಟು ಮುಹಮ್ಮದ್ ನಝೀರ್ 8,99,000 ರೂ., ದಿಲ್‌ಶಾದ್ 2,40,000 ರೂ., ಜಮಾಲುದ್ದೀನ್ 3,50,000 ರೂ. ಸಾಲ ಪಡೆದಿದ್ದರು. ಅಡವಿಟ್ಟ ಈ ಚಿನ್ನವನ್ನು ವಾರ್ಷಿಕವಾಗಿ ತಪಾಸಣೆ ಮಾಡಿದಾಗ ಅಡವಿಟ್ಟ ಬಳೆಗಳೆಲ್ಲವೂ ನಕಲಿ ಎಂದು ತಿಳಿದು ಬಂದಿದೆ.

ಬಳಿಕ ಸೈನಾಝ್ ಎಂಬಾಕೆ 5 ಚಿನ್ನದ ಬಳೆಗಳನ್ನು ತಂದು ಅಡವಿರಿಸಿ ಹಣ ನೀಡುವಂತೆ ಕೇಳಿದ್ದು, ಪರಿವೀಕ್ಷಕರು ಅದನ್ನು ತಪಾಸಣೆ ಮಾಡಿದಾಗ ನಕಲಿ ಎಂದು ತಿಳಿದು ಬಂದಿದೆ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ನಾಲ್ಕು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *