Breaking
9 May 2026, Sat

ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಜನಪ್ರಿಯರಾಗಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನ

ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಆಶಾ ಪಂಡಿತ್‌ ಹೃದಯಾಘಾತದಿಂದ ಇಂದು(ಜ. 23) ನಿಧನರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ವಿಬಿನ್ನ ಶೈಲಿಯಲ್ಲಿ ಬೈಗುಳದ ರೀಲ್ಸ್‌ ಗಳ ಮೂಲಕ ಗಮನ ಸೆಳೆದಿದ್ದ ಆಶಾ ಪಂಡಿತ್ ಅವರು ಹಲವಾರು ಅಭಿಮಾನಿ ಬಳಗವನ್ನು ಹೊಂದಿದ್ದರು.

ಪಡೀಲ್ ಬಳಿ ಒಂದು ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಇವರು ಅನೇಕ ಸೋಷಿಯಲ್‌ ಮೀಡಿಯಾ ಕಂಟೆಟ್‌ ಕ್ರಿಯೆಟರ್ಸ್ ಹಾಗೂ ಅಭಿಮಾನಿಗಳು ಅಲ್ಲಿ ಭೇಟಿ ಕೊಡುತ್ತಿದ್ದರು.

ಮಾಹಿತಿಯ ಪ್ರಕಾರ ಜ.22 ರಂದು ರಾತ್ರಿ ವಾಂತಿ ಸಮಸ್ಯೆ ಕಾಣಿಸಿಕೊಂಡಿದ್ದು ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *