Breaking
25 Sep 2026, Fri

ಸಜೀಪ ಮಾಗಣೆಯಲ್ಲಿ ಸಾಮೂಹಿಕ ಶ್ರೀ ಮೃತ್ಯುಂಜಯ ಶಾಂತಿ ಹೋಮ

ಬಂಟ್ವಾಳ: ಸಜೀಪ ಮಾಗಣೆಯ ಶ್ರೀ ನಡಿಯೇಳು ದೈವಂಗಳು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರವಾದ ಸಜೀಪ ಮೂಡದ ಮಿತ್ತ ಮಜಲುವಿನ ಪ್ರಶ್ನ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಸಾಮೂಹಿಕ ಶ್ರೀ ಮೃತ್ಯುಂಜಯ ಶಾಂತಿ ಹೋಮವು ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಜೀಪ ಗುತ್ತು ಗಡಿಪ್ರದಾನ ರಾಧ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನವಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ದೇವಿಪ್ರಸಾದ್ ಪೂಂಜ, ಶಿವಪ್ರಸಾದ್ ಶೆಟ್ಟಿ, ಅನುಪ್ ಆಳ್ವ, ಹರೀಶ್ ರೈ, ಸತೀಶ್ ಪೆರ್ಗಡೇ, ಚಂದ್ರಶೇಖರ ಶೆಟ್ಟಿ ಕುಂಜ್ಞ ಪೂಜಾರಿ, ವಾಸು ಪೂಜಾರಿ, ಗಿರೀಶ್ ಕುಮಾರ್ ಜಯಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *